ಬಾರ್ಸಿಲೋನಾ: ವಿಶ್ವದಾದ್ಯಂತ ಹರಡಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವ ಕರೊನಾ ಸೋಂಕು ಇದೀಗ ಪ್ರಾಣಿಗಳ ಮೇಲೂ ತನ್ನ ದಾಳಿಯನ್ನು ಮುಂದುವರಿಸಿದೆ. ಸ್ಪೇನ್ನ ಒಂದೇ ಮೃಗಾಲಯದಲ್ಲಿ ನಾಲ್ಕು ಸಿಂಹಗಳಲ್ಲಿ ಕರೊನಾ ಸೋಂಕು ದೃಢವಾಗಿದೆ.
ಬಾರ್ಸಿಲೋನಾ ಮೃಗಾಲಯದ ಸಿಂಹಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಾಲಾ, ನೀಮಾ ಮತ್ತು ರನ್ ರನ್ ಹೆಸರಿನ ಹೆಣ್ಣು ಸಿಂಹಗಳು ಮತ್ತು ಕಿಯಂಬೆ ಹೆಸರಿನ ಗಂಡು ಸಿಂಹದಲ್ಲಿ ಕರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಈ ಸಿಂಹಗಳನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ನಾಲ್ಕೂ ಸಿಂಹಗಳಲ್ಲಿ ಸೋಂಕಿರುವುದಾಗಿ ವರದಿ ಬಂದಿದೆ. ಅದರ ಜತೆಯಲ್ಲಿ ಮೃಗಾಲಯದ ಕೆಲಸ ಮಾಡುವ ಇಬ್ಬರು ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.
ಈ ಹಿಂದೆ ನ್ಯೂಯಾರ್ಕ್ನ ಬ್ರಾಂಕ್ಸ್ ಮೃಗಾಲಯದಲ್ಲಿ ನಾಲ್ಕು ಹುಲಿ ಮತ್ತು ಮೂರು ಸಿಂಹಗಳಲ್ಲಿ ಸೋಂಕು ದೃಢವಾಗಿತ್ತು. ಈ ಮೃಗಾಲಯದ ಅಧಿಕಾರಿಗಳ ಸಲಹೆ ಪಡೆದುಕೊಂಡಿರುವ ಬಾರ್ಸಿಲೋನಾ ಮೃಗಾಲಯ ಸಿಂಹಗಳಿಗೆ ಚಿಕಿತ್ಸೆ ಮುಂದುವರಿದೆ. (ಏಜೆನ್ಸೀಸ್)