ಮಧ್ಯಪ್ರದೇಶ: ಮದುವೆಗೆ ನಾಲ್ಕು ದಿನ ಬಾಕಿ ಇರುವಾಗಲೇ ಪೊಲೀಸರು ಎದುರು 20ವರ್ಷದ ಮಗಳನ್ನು(Daughter)ತನ್ನ ತಂದೆ ಬಂದೂಕಿನಿಂದ ಗುಂಡಿಟ್ಟು ಕೊಂದ ಘಟನೆ ಎಂದು ಇಲ್ಲಿನ ಗ್ವಾಲಿಯರ್ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ತನು ಗುರ್ಜಾರ್(20) ಮೃತೆ ಎಂದು ಗುರುತಿಸಲಾಗಿದೆ. ಆರೋಪಿ ಮಹೇಶ್ ಗುರ್ಜಾರ್ ನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ಮತ್ತು ಸಹಕರಿಸಿದ ಮತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳು ತನು ಗುರ್ಜಾರ್ ಮದುವೆ ನಿರಾಕರಿಸಿದ್ದಾಳೆ. ಮತ್ತೊಬ್ಬರನ್ನು ಪ್ರೀತಿಸಿದ್ದು, ಅತನ್ನನ್ನೇ ಮದುವೆಯಾಗುವುದಾಗಿ ಹೇಳಿದ್ದಳು. ಅಲ್ಲದೆ, ಕುಟುಂಬಸ್ಥರ ಎದುರು ಸಾರ್ವಜನಿಕವಾಗಿ ಮದುವೆ ನಿರಾಕರಿಸಿದ್ದಳು ಎಂದು ಹೇಳಲಾಗಿದೆ. ಈ ಕಾರಣದಿಂದ ಕುಪಿತಗೊಂಡ ತಂದೆ ಮಹೇಶ್ ಗುರ್ಜಾರ್ ತನ್ನ ಸಹೋದರ ಸಂಬಂಧಿ ರಾಹುಲ್ ಜತೆ ಗೂಡಿ ಸ್ವದೇಶಿ ನಿರ್ಮಿತ ಬಂದೂಕಿನಿಂದ ಆಕೆ ಮೇಲೆ ಗುಂಡು ಹಾರಿಸಿದ್ದಾರೆ. ರಾಹುಲ್ ಹೆಚ್ಚುವರಿಯಾಗಿ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಳು ತಿಳಿಸಿದ್ದಾರೆ.
ಸಾವಿನ ಒಂದು ದಿನದ ಮುಂಚೆ ಅಂದರೆ ರಾತ್ರಿ ಮದುವೆ ನಿರಾಕರಿಸಿದ ಬಗ್ಗೆ ಮತ್ತು ಪೊಲೀಸರು ಇದಕ್ಕೆ ಸಹಕರಿಸುವಂತೆ ಕೋರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಕಾರಣದಿಂದ ಮನೆಗೆ ಪೊಲೀಸ್ ಅಧಿಕಾರಿಗಳ ಧಾವಿಸಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳು ಕೃತ್ಯ ಎಸಗಿದ್ದಾರೆ. ಆರೋಪಿ ಮಹೇಶ್ನನ್ನು ಬಂಧಿಸಿದ್ದು ಬಂದೂಕನ್ನು ವಶ ಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ರಾಹುಲ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)