ಅಲ್ಬೆರ್ಟಾ (ಕೆನಡಾ): ಕೆನಡಾದ ಅಲ್ಬೆರ್ಟಾದಲ್ಲಿ ಡೈನಾಸರ್ನ ಪಳೆಯುಳಿಕೆಗಳು , ಅದು 110 ದಶಲಕ್ಷ ವರ್ಷಗಳ ಹಿಂದಿನದ್ದು ಎಂದು ಗುರುತಿಸಲಾಗಿದೆ.
ಕ್ರೆಟೇಶಿಯಸ್ ಕಾಲಕ್ಕಿಂತಲೂ (ಜುರಾಸಿಕ್ ಕಾಲಕ್ಕಿಂತ ಸುಮಾರು 79 ದಶಲಕ್ಷ ವರ್ಷಗಳು) ಹಿಂದಿನದ್ದು ಇದು ಎಂದು ಸಂಶೋಧಕರು ಹೇಳಿದ್ದಾರೆ.
ಬೊರೆಫೆಲ್ಟಾ ಮಾರ್ಕ್ ಮಿಚೆಲಿ ಎಂಬ ಹೆಸರಿನ ಈ ಡೈನಾಸರ್ನ ದೇಹದ ಮೇಲೆ ಕೋಡು, ಕೊಂಬು ಮುಂತಾದ ಆಯುಧಗಳನ್ನು ಹೊಂದಿದ್ದವು ಎಂದು ತಿಳಿದು ಬಂದಿದೆ.
ವಿಶೇಷ ಎಂದರೆ, ಇದರ ಹೊಟ್ಟೆಯಲ್ಲಿ ಕೊನೆಯ ಬಾರಿ ತಿಂದ ಆಹಾರವಾಗಿರುವ ಸಸ್ಯದ ಎಲೆಗಳು ಸಿಕ್ಕಿದ್ದು, ಇದು ಸಸ್ಯಾಹಾರಿ ಡೈನಾಸರ್ ಎಂದು ತಿಳಿದುಬಂದಿದೆ ಎಂದಿದ್ದಾರೆ ಸಂಶೋಧಕರು. ಸುಮಾರು 18 ಅಡಿ ಇದ್ದ ಒಂದೂವರೆ ಟನ್ ಭಾರವಿತ್ತು. ಅತಿ ದೊಡ್ಡ ಆಮೆಯಾಕಾರದಲ್ಲಿ ಅಗಲವಾದ ದೇಹಕ್ಕೆ ಚಿಕ್ಕ ತಲೆ ಇತ್ತು. ನಾಲ್ಕು ಸಣ್ಣ ಕಾಲುಗಳ ಮೂಲಕ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
"ಸಸ್ಯಹಾರಿ ಡೈನೋಸರ್ಗಳ ನೇರ ಪಳೆಯುಳಿಕೆಗಳು ಸಿಕ್ಕಿದ್ದು ಬಹಳ ಅಪರೂಪ. ಹಲ್ಲು, ದವಡೆ, ಆಗ ಇದ್ದ ಸಸ್ಯಗಳು ಅದರಲ್ಲಿ ಎಷ್ಟು ಪೋಷಕಾಂಶಗಳು ಇದ್ದವು ಎಂಬುದರ ದಾಖಲೆಗಳು ಪರೋಕ್ಷವಾಗಿ ಲಭ್ಯವಾಗಿವೆ" ಎಂದು ಅಲ್ಬೆರ್ಟಾದ ರಾಯಲ್ ಟೈರೆಲ್ ಪ್ರಾಗ್ಜೀವ ವಸ್ತು ಸಂಗ್ರಹಾಲಯದ ಸಂಶೋಧಕ ಕೇಬಲ್ ಬ್ರೌನ್ ಹೇಳಿದ್ದಾರೆ.
ಈ ಕುರಿತು ರಾಯಲ್ ಸೊಸೈಟಿ ಓಪನ್ ಸೈನ್ಸ್ ಪ್ರಕಟಿಸಿದ ಅಧ್ಯಯನ ಗ್ರಂಥದಲ್ಲಿ ಈ ವಿವರಗಳನ್ನು ನೀಡಲಾಗಿದೆ.
ಈಗ ಸಿಕ್ಕಿರುವ ಬೊರೆಫೆಲ್ಟಾ ಮಾರ್ಕ್ ಮಿಚೆಲಿ ನೋಡೊಸಾರ್ಸ್ ವರ್ಗಕ್ಕೆ ಸೇರಿದೆ. ಅದರ ಹೊಟ್ಟೆಯಲ್ಲಿದ್ದ ಪಳೆಯುಳಿಕೆಗಳು ನಿರ್ದಿಷ್ಟ ವರ್ಗದ ಸಸ್ಯಗಳಾಗಿವೆ. ಅಲ್ಲದೆ, ಇದ್ದಿಲಿನ ಚೂರೂ ಲಭ್ಯವಾಗಿದೆ. ಡೈನೋಸಾರ್ಗಳು, ಪ್ರವಾಹಕ್ಕೆ ಅಥವಾ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಸರ್ವನಾಶವಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)