More

    ತಮಗೆ ತಾವೇ ದಂಡ ಹಾಕಿಸಿಕೊಂಡು ಮಾದರಿಯಾದ ಅಧಿಕಾರಿ!

    ಕಾನ್ಪುರ: ಕರೊನಾ ವೈರಸ್​ ಹಿನ್ನೆಲೆಯಲ್ಲಿ ಮಾಸ್ಕ್​ ಧರಿಸದಿದ್ದರೆ ದಂಡ ಹಾಕುವ ಕಾನೂನು ಬಂದಿದೆ. ಜನರು ಮಾಸ್ಕ್​ ಧರಿಸದಿದ್ದ ದಂಡ ವಿಧಿಸುವ ಪೊಲೀಸರೇ ಅದೆಷ್ಟೋ ಸಲ ಮಾಸ್ಕ್​ ಧರಿಸದೇ ಓಡಾಡುವ ದೃಶ್ಯಗಳು ಸಾಮಾನ್ಯವಾಗಿವೆ. ಆದರೆ ಅವರನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ.

    ಆದರೆ, ಕಾನ್ಫುರ ವಲಯದ ಪೊಲೀಸ್ ಮಹಾನಿರ್ದೇಶಕ ಮೊಹಿತ್ ಅಗರವಾಲ್​ ಅವರು ಮಾತ್ರ ತಮಗೆ ತಾವೇ ದಂಡ ಹಾಕಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಇದನ್ನೂ ಓದಿ: VIDEO: ಹೀಗೊಂದು ಮದುವೆ: ಉಂಗುರದ ಬದಲು ಮಾಸ್ಕ್​ ಎಕ್ಸ್​ಚೇಂಜ್​!

    ಶುಕ್ರವಾರ ಪರಿಶೀಲನೆಗಾಗಿ ಬಾರ್ರಾಕ್ಕೆ ತೆರಳಿದ ನಾನು ಮಾಸ್ಕ್ ಧರಿಸದೆ ವಾಹನದಿಂದ ಕೆಳಗೆ ಇಳಿದಿದ್ದ ಅವರು ಮರೆತು ಮಾಸ್ಕ್​ ಧರಿಸಿರಲಿಲ್ಲ. ವೃತ್ತ ಅಧಿಕಾರಿಗಳು ಸೇರಿದಂತೆ ಅಧೀನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ನಂತರ ಮಾಸ್ಕ್ ಧರಿಸದೆ ಇರುವುದು ಗಮನಕ್ಕೆ ಬಂದಿತ್ತು. ಕೂಡಲೇ ಅಧಿಕೃತ ವಾಹನದಿಂದ ಮಾಸ್ಕ್ ತಂದು ಮುಖಕ್ಕೆ ಹಾಕಿಕೊಂಡ ಅವರು, ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ದಂಡ ವಿಧಿಸುವಂತೆ ಬಾರ್ರಾ ಪೊಲೀಸ್ ಠಾಣೆಯ ಅಧಿಕಾರಿ ರಂಜೀತ್ ಸಿಂಗ್ ಅವರನ್ನು ಕೇಳಿಕೊಂಡಿದ್ದಾರೆ.

    ದಂಡ ನೀಡುವ ಸಂಬಂಧ ಚಲನ್ ಸಿದ್ದಪಡಿಸಿದ ಠಾಣಾ ಮುಖ್ಯಾಧಿಕಾರಿ ಪ್ರತಿಯನ್ನು ಐಜಿಯವರಿಗೆ ನೀಡಿದ್ದು, ಸ್ಥಳದಲ್ಲಿಯೇ 100 ರೂ. ದಂಡವನ್ನು ಕಟ್ಟಿದ್ದಾರೆ.

    ಇದನ್ನೂ ಓದಿ: 50 ಮನೆಗೆ ಕನ್ನ ಹಾಕಿದ್ದ ಕಳ್ಳ ಸಿಕ್ಕಿಬಿದ್ದ

    ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಉದಾಹರಣ ನೀಡಲು ದಂಡ ಕಟ್ಟಿದ್ದೇನೆ. ಸಾರ್ವಜನಿಕವಾಗಿ ಮಾಸ್ಕ್ ಧರಿಸದೆ ಇರುವವರು 100 ರೂ. ದಂಡ ಕಟ್ಟುವಂತೆ ಸರ್ಕಾರದ ಆದೇಶವಿದೆ. ಅಧಿಕಾರಿಯಾಗಿರುವ ನಾನು ನಿಯಮ ಪಾಲನೆ ಮಾಡುವುದು ಮೊದಲ ಕರ್ತವ್ಯವಾಗಿದೆ. ಆದರೆ ನಾನು ಬೇಜವಾಬ್ದಾರಿ ತೋರಿದ್ದ ಹಿನ್ನೆಲೆಯಲ್ಲಿ, ದಂಡ ಹಾಕಿಸಿಕೊಂಡಿದ್ದೇನೆ. ಯಾರು ಕೂಡ ಮಾಸ್ಕ್​ ಧರಿಸದೇ ನಿಯಮ ಮೀರಬಾರದು ಎಂದಿದ್ದಾರೆ. (ಏಜೆನ್ಸೀಸ್​)

    ‘ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಲು ಇನ್ಮುಂದೆ ವಿಡಿಯೋ ಮಾಡಿದ್ರೆ ಶೂಟ್ಔಟ್​!​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts