More

    ಹೊನ್ನಾಳಿಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

    ಹೊನ್ನಾಳಿ: ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ದಿನದಂದು ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪಿಆರ್‌ಒ, ಎಪಿಆರ್‌ಒ ಹಾಗೂ ಪಿಒಗಳಿಗೆ ಮಂಗಳವಾರ ಪಟ್ಟಣದ ಚನ್ನೇಶ್ವರ ಪಿಯು ಕಾಲೇಜಿನಲ್ಲಿ 2ನೇ ಹಂತದ ತರಬೇತಿಯನ್ನು ನೀಡಲಾಯಿತು.

    ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಸಹಾಯಕ ಚುನಾವಣಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಮಷ್ಟರಿಂಗ್ ಕೇಂದ್ರದಿಂದ ಮತಗಟ್ಟೆ ತಲುಪಿ, ಮತದಾನ ಮುಗಿದ ನಂತರ ಡಿ ಮಷ್ಟರಿಂಗ್ ಕೇಂದ್ರಕ್ಕೆ ಬರುವವರೆಗೂ ಎಲ್ಲ್ಲ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇದರಲ್ಲಿ ಸ್ವಲ್ಪ ಲೋಪವಾದರೂ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.

    ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವಾಗ ರಾಜಕೀಯ ನಾಯಕರ ಬಳಿ ಸಂಬಂಧ ಹೊಂದಬಾರದು, ಅವರ ಮನೆಗಳಿಂದ ಬರುವ ಊಟ, ತಿಂಡಿ ಸ್ವೀಕರಿಸಬಾರದು ಎಂದು ತಿಳಿಸಿದರು.

    ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ ಪುರುಷ ಹಾಗೂ ಮಹಿಳಾ ಸಾಲುಗಳನ್ನು ಪ್ರತ್ಯೇಕವಾಗಿ ಮಾಡಬೇಕು, ಮತದಾರ ಮತ ಹಾಕಲು ಗುರುತಿನ ಚೀಟಿ ತರಲೇಬೇಕು. ತರದಿದ್ದರೆ ಅಂತಹವರಿಗೆ ಅವಕಾಶ ಮಾಡಿಕೊಡಬೇಡಿ ಎಂದು ಸೂಚಿಸಿದರು.

    ಮೊದಲು ಬರುವವರಿಂದ ಮತದಾನ ಮಾಡಿಸಿ ಮತಯಂತ್ರ ಸೂಕ್ತ ರೀತಿಯಲ್ಲಿ ಇದೆಯೋ ಇಲ್ಲವೋ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

    ತರಬೇತಿಯಲ್ಲಿ 274 ಪಿಆರ್‌ಒ, ಎಪಿಆರ್‌ಒ 274 ಹಾಗೂ 548 ಪಿಒಗಳು ಸೇರಿ ಒಟ್ಟು 1096 ಮತಗಟ್ಟೆ ಅಧಿಕಾರಿಗಳಿದ್ದರು.

    ಹೊನ್ನಾಳಿ ತಹಸೀಲ್ದಾರ್ ಪುರಂದರ ಹೆಗ್ಡೆ, ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ಗ್ರೇಡ್ 2 ತಹಸೀಲ್ದಾರ್ ಗೋವಿಂದಪ್ಪ, ಪುರಸಭಾ ಮುಖ್ಯಾಧಿಕಾರಿ ನಿರಂಜನಿ, ತರಬೇತುದಾರ ಓಹಿಲೇಶ್ವರ್, ಸುರೇಶ್, ಸಂತೋಷ್, ರವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts