More

    ಅಣಬೆ ಕೃಷಿಯಿಂದ ಆರ್ಥಿಕ ಸಬಲೀಕರಣ

    ಶಿವಮೊಗ್ಗ: ಅಪೌಷ್ಟಿಕತೆ ನಿರ್ವಹಣೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಅಣಬೆ ಬೇಸಾಯ ಉತ್ತಮ ಮಾರ್ಗ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲಾನಾಯ್ಕಾ ಹೇಳಿದರು.

    ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಹಾಗೂ ಕೃಷಿ ವಿಜ್ಞಾನ ಕೇಂದ್ರದಿಂದ ಏರ್ಪಡಿಸಿದ್ದ ಬೇಕರಿ ಹಾಗೂ ಹೈಟೆಕ್ ಅಣಬೆ ಬೇಸಾಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪೂರಕ ಮಾರುಕಟ್ಟೆ ಸಂಪರ್ಕದೊಂದಿಗೆ ರೈತ ಮತ್ತು ರೈತ ಮಹಿಳೆಯರು ಯಶಸ್ವಿ ಉದ್ಯಮಿಗಳಾಗಬಹುದು. ಇದರ ಜತೆಗೆ ಆರೋಗ್ಯಕರ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲು ಬೇಕರಿ ಉದ್ಯಮವೂ ಸೂಕ್ತ ಎಂದು ಅಭಿಪ್ರಾಯಪಟ್ಟರು.
    ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಮಾತನಾಡಿ, ವಿವಿಯು ನಾಲ್ಕು ಲಕ್ಷ ರೈತರಿಗೆ ಕೃಷಿ ಹಾಗೂ ಕೃಷಿಯೇತರ ತಂತ್ರಜ್ಞಾನಗಳನ್ನು ತಲುಪಿಸುವ ಗುರಿ ಹೊಂದಿದೆ. ಬೇಕರಿ ಮತ್ತು ಅಣಬೆ ಉದ್ಯಮಗಳು ಸ್ವ ಉದ್ಯೋಗವನ್ನು ಸೃಷ್ಟಿಸುತ್ತಿವೆ. ಗ್ರಾಹಕರ ಬೇಡಿಕೆಗೆ ತಕ್ಕಂತ ಆಹಾರಗಳನ್ನು ಪೂರೈಸಲು ಹಾಗೂ ಸುಸ್ಥಿರ ಜೀವನಕ್ಕಾಗಿ ಸೂಕ್ತ ಕೌಶಲಾಭಿವೃದ್ಧಿ ತರಬೇತಿ ಅಗತ್ಯ ಎಂದು ಹೇಳಿದರು.
    ಕೃಷಿ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಎಂ.ದಿನೇಶ್ ುಮಾರ್, ಆಯೋಜಕ ಡಾ. ನಂದೀಶ್, ಡಾ. ಸುಧಾರಾಣಿ, ಡಾ. ಜಿ.ಕೆ.ಗಿರಿಜೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts