More

    VIDEO: ಹೀಗೊಂದು ಮದುವೆ: ಉಂಗುರದ ಬದಲು ಮಾಸ್ಕ್​ ಎಕ್ಸ್​ಚೇಂಜ್​!

    ಕಾಠ್ಮಂಡು: ಕರೊನಾ ವೈರಸ್​ ಬಂದ ದಿನದಿಂದ ಎಲ್ಲೆಲ್ಲೂ ಮಾಸ್ಕ್​ದ್ದೇ ಮಾತು. ಒಂದೆಡೆ ಲಾಕ್​ಡೌನ್​ನಿಂದಾಗಿ ಮದುವೆಗಳು ಮುಂದೂಡಲ್ಪಟ್ಟಿದ್ದರೆ, ಇನ್ನು ಕೆಲವರು ಲಾಕ್​ಡೌನ್​ ನಡುವೆಯೇ ಕೆಲವೇ ಜನರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ.

    ಮದುವೆ-ಸಮಾರಂಭಗಳಿಗೆ ಅನುಮತಿ ನೀಡಿರುವ ಹಲವು ಸರ್ಕಾರಗಳು ಕಡ್ಡಾಯವಾಗಿ ಕೆಲವೊಂದು ನಿಯಮ ಪಾಲನೆ ಮಾಡಬೇಕು ಎಂದಿದೆ. ಅವುಗಳ ಪೈಕಿ ಪ್ರಮುಖವಾದದ್ದು ಮಾಸ್ಕ್​ ಧರಿಸುವಿಕೆ.

    ಇದನ್ನೂ ಓದಿ: ಮಧ್ಯರಾತ್ರಿಯವರೆಗೂ ಮೊಬೈಲ್​ ಗೇಮ್​ ಆಡುತ್ತಿದ್ದ ಬಾಲಕ ಅಲ್ಲಿಯೇ ಹೆಣವಾದದ್ದು ಹೇಗೆ?

    ಇದೇ ಕಾರಣಕ್ಕೆ ಮದುಮಕ್ಕಳು ಮಾಸ್ಕ್​ ಧರಿಸಿಯೇ ಮದುವೆಯಾದಂಥ ಹಲವಾರು ವಿಡಿಯೋ, ಫೋಟೋಗಳು ವೈರಲ್​ ಆಗಿವೆ. ಆದರೆ ನೇಪಾಳದ ಕಾಠ್ಮಂಡುವಿನಲ್ಲಿ ಸ್ವಲ್ಪ ವಿಭಿನ್ನ ಎನಿಸುವಂಥ ಮದುವೆ ನಡೆದಿದ್ದು ಅದೀಗ ಭಾರಿ ವೈರಲ್​ ಆಗಿದೆ.

    ಅದೇನೆಂದರೆ, ಸಾಮಾನ್ಯವಾಗಿ ಇಲ್ಲಿಯ ಪದ್ಧತಿಯಲ್ಲಿ ಹಾರ ಬದಲಾವಣೆ ಜತೆಗೆ ಮದುವೆಯ ವೇಳೆ ಉಂಗುರದ ಬದಲಾವಣೆಯೂ ನಡೆಯುತ್ತದೆ. ಆದರೆ ಇಲ್ಲಿ ನಡೆದ ಒಂದು ಮದುವೆಯಲ್ಲಿ ಹಾರ ಬದಲಾವಣೆಯ ನಂತರ ಮಾಸ್ಕ್​ ಬದಲಾವಣೆಯನ್ನು ವಧು-ವರರು ಮಾಡಿಕೊಂಡಿದ್ದಾರೆ. ಇದರ ಬದಲಾವಣೆ ನಂತರ ಅಲ್ಲಿ ಇದ್ದ ಜನರು ಚಪ್ಪಾಳೆ, ಸೀಟಿಯ ಮೂಲಕ ಶುಭ ಹಾರೈಸಿದ್ದಾರೆ.

    ಇದನ್ನು ಮದುವೆಯಲ್ಲಿ ಹಾಜರು ಇದ್ದ ಶ್ವೇತಾ ಅಧಿಕಾರ್​ ಎನ್ನುವವರು ತಮ್ಮ ಟ್ವಿಟರ್​ನಲ್ಲಿ ಇದರ ವಿಡಿಯೋ ಶೇರ್​ ಮಾಡಿದ್ದರು. ಇದೀಗ ಭಾರಿ ವೈರಲ್​ ಆಗಿದ್ದು, ಸಾವಿರಾರು ರೀಟ್ವೀಟ್​ಗಳನ್ನು ಕಂಡಿದೆ, ಜತೆಗೆ ಸಾವಿರಾರು ಮಂದಿ ಕಮೆಂಟ್​ ಮಾಡುತ್ತಿದ್ದಾರೆ.

    ಇದನ್ನೂ ಓದಿ: ‘ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಲು ಇನ್ಮುಂದೆ ವಿಡಿಯೋ ಮಾಡಿದ್ರೆ ಶೂಟ್ಔಟ್​!​’

    ವಧು-ವರರು ಪರಸ್ಪರ ಹೂವಿನ ಹಾರದ ಬದಲು ಮಾಸ್ಕ್​ ಹಾರ ಹಾಕಿಕೊಂಡರೂ ಅಚ್ಚರಿಯಿಲ್ಲ, ಇಂಥ ದಿನ ಶೀಘ್ರವೇ ಬರಲಿದೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

     

    ಪ್ರವೇಶ ಕೊಡದ ಎಂಟು ಆಸ್ಪತ್ರೆಗಳು: 13 ಗಂಟೆ ಸುತ್ತಿ ಆಂಬ್ಯುಲೆನ್ಸ್​ನಲ್ಲೇ ಪ್ರಾಣಬಿಟ್ಟ ಗರ್ಭಿಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts