ನ್ಯೂಸ್

ಹನ್ನೊಂದು ದಿನ ಉಪವಾಸ ಇದ್ದು ರಾಮನ ಪೂಜೆ ಮಾಡಿದ ಮೋದಿ ಗ್ರೇಟ್: ಎಚ್​.ಡಿ.ದೇವೇಗೌಡ

ನವದೆಹಲಿ: ಹನ್ನೊಂದು ದಿನ ಉಪವಾಸ ಇದ್ದು, ವ್ರತ ಮಾಡಿ ರಾಮನ ಪೂಜೆ ಮಾಡಿದ ಮೋದಿ ನಿಜಕ್ಕೂ ಗ್ರೇಟ್ ಎಂದು ಜೆಡಿಎಸ್​ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಪ್ರಶಂಸೆ ವ್ಯಕ್ತಪಡಿಸಿದರು.

ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ದೇವೇಗೌಡರು, ಶ್ವೇತ್ರ ಪತ್ರ ಹೊರಡಿಸಿದರ ಬಗ್ಗೆ ಮೆಚ್ಚುಗೆ ಸೂಚಿಸಿ, ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್​ ಅವರನ್ನು ಅಭಿನಂದಿಸಿದರು.

ನಾನು ಮೊದಲ ಬಾರಿ ಸಂಸತ್ತಿಗೆ ಬಂದಾಗ ನನಗೆ ಹಿಂದಿ ಬರ್ತಾ ಇರಲಿಲ್ಲ. ಯಾಕಂದ್ರೆ ನಾನು ರೈತ. ನನ್ನ ಹೆಂಡತಿಗೂ ಹಿಂದಿ ಬರ್ತಾ ಇರಲಿಲ್ಲ ಎಂದ ದೇವೇಗೌಡರು, ಆಯೋಧ್ಯೆ ಬಗ್ಗೆ ಮಾತನಾಡಿ, ನಾನು, ನನ್ನ ಹೆಂಡತಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ವಿ. ತುಂಬಾ ಖುಷಿಯಾಯಿತು. ನನಗೆ ರಾಮನ ದರ್ಶನ ಕಲ್ಪಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಎಂದರು.

ಇದೇ ಸಂದರ್ಭದಲ್ಲಿ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಚೌದರಿ ಚರಣ್ ಸಿಂಗ್ ಬಗ್ಗೆ ಮಾತನಾಡುವಾಗ ದೇವೇಗೌಡರು ಭಾವೋದ್ವೇಗಕ್ಕೆ ಒಳಗಾಗದರು. ಎಂ.ಎಸ್​. ಸ್ವಾಮಿನಾಥನ್​ ಅವರನ್ನು 1974ರಲ್ಲಿ ನಾನು ಫಿಲಿಫೈನ್ಸ್ ಅಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದೆ ಎಂದರು. ಸ್ವಾಮಿನಾಥನ್​ ಅವರಿಗೂ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ದೊಡ್ಡ ವ್ಯಕ್ತಿಗಳಿಗೆ ಭಾರತ ರತ್ನ ನೀಡಿರುವ ಕೇಂದ್ರ ಸರ್ಕಾರಕ್ಕೆ ಎಚ್​ಡಿಡಿ ಧನ್ಯವಾದ ತಿಳಿಸಿದ್ದಾರೆ.

ನನ್ನ ಸಂಭಂಧಿಕರ ಮದ್ವೆ ಇರುವುದರಿಂದ ನಾನು ಮೊನ್ನೇನೆ ಊರಿಗೆ ಹೋಗಬೇಕಾಗಿತ್ತು. ಆದರೆ ಕಲಾಪ ಇವತ್ತಿನವರೆಗೂ ಮುಂದೂಡಿರೋದ್ರಿಂದ ಹೋಗುವುದಕ್ಕೆ ಆಗುತ್ತಿಲ್ಲ. ಇಂದು ಹೋಗಲೇಬೇಕಿದೆ. ಆದರೆ ವಿಮಾನ ಇಲ್ಲ. ದಯವಿಟ್ಟು ನನಗೆ ವಿಮಾನದ ವ್ಯವಸ್ಥೆ ಮಾಡಿಕೊಡಿ ಎಂದು ಸದನದಲ್ಲೇ ಎಚ್​ಡಿಡಿ ಮನವಿ ಮಾಡಿದರು.