More

    ಅಮೇಜಾನ್​ನಿಂದ “ಹೋಮ್​” ಡೆಲಿವರಿ: ಮಡಚಬಹುದು, ಸಾಗಿಸಲು ಸುಲಭ, ಬೆರಗಾಗುವಂತಿದೆ ಇದರ ಬೆಲೆ

    ನವದೆಹಲಿ: ಅಮೇಜಾನ್​ನಲ್ಲಿ ನಾವು ಹೋಮ್​ ಡಿಲಿವರಿ ಬಗ್ಗೆ ಕೇಳಿದ್ದೇವೆ ಆದರೆ ಈಗ ಹೋಮೇ ಡಿಲಿವರಿ ಆಗುತ್ತಿದೆ. ಅಚ್ಚರಿಯಾದರೂ ಇದು ಸತ್ಯ. ಮಡಚಬಹುದಾದ ಹಾಗೂ ಸುಲಭವಾಗಿ ಸಾಗಿಸಬಹುದಾದ ಮನೆಯನ್ನು ಅಮೇಜಾನ್​ ಮಾರಾಟ ಮಾಡುತ್ತಿದೆ. ಈ ಮನೆಯ ವಿಶೇಷತೆ ಏನು? ಬೆಲೆ ಎಷ್ಟು? ಎಂಬುದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

    ಕಳೆದ ಮಂಗಳವಾರ ಅಮೆರಿಕದ ಟಿಕ್​ಟಾಕ್​ ಬಳಕೆದಾರರೊಬ್ಬರು ಅಮೇಜಾನ್​ನಲ್ಲಿ ಫೋಲ್ಡೇಬಲ್​ ಮನೆಯನ್ನು ಖರೀದಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಈ ಫೋಲ್ಡೆಬಲ್​ ಮನೆ ಭಾರಿ ಸುದ್ದಿಯಾಗಿದೆ. ಅಮೆರಿಕದಲ್ಲಿ ಬಾಡಿಗೆ ಗಗನಮುಖಿಯಾಗಿದೆ ಮತ್ತು ಆಸ್ತಿಯ ಬೆಲೆಗಳು ಸಹ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅನೇಕ ಜನರು ಚಿಕ್ಕ ಮನೆಗಳನ್ನು ಆಯ್ಕೆ ಮಾಡುವುದು ಅಥವಾ ಪೋರ್ಟಬಲ್ ಮನೆಗಳನ್ನು ನಿರ್ಮಿಸುತ್ತಿದ್ದಾರೆ.

    ಅಂದಹಾಗೆ ಈ ಫೋಲ್ಡೇಬಲ್​ ಮನೆಯ ಬೆಲೆ 26 ಸಾವಿರ ಡಾಲರ್​. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 21.3 ಲಕ್ಷ ರೂಪಾಯಿ. ಇದರಲ್ಲಿ ಸಣ್ಣು ಅಡುಗೆ ಕೋಣೆ, ಲಿವಿಂಗ್​ ಏರಿಯಾ, ಬೆಡ್​ರೂಮ್​ ಮತ್ತು ಟಾಯ್ಲೆಟ್​ ಸೌಲಭ್ಯ ಇರಲಿದೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, ಕೆಲ ನೆಟ್ಟಿಗರು ಮನೆಯನ್ನು ನೋಡಿ ನಂಬಲಾಗದ ಮತ್ತು ವೆರಿ ಕೂಲ್​ ಎಂದು ಕಮೆಂಟಿಸಿದ್ದಾರೆ. ಇನ್ನೂ ಕೆಲವರು ಈ ಮನೆಯಿಂದ ಹೆಚ್ಚೇನೂ ಪ್ರಭಾವಿತರಾಗಿಲ್ಲ.

    ಹೊಸ ತಲೆಮಾರಿನ ಮನೆ ಇದಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಕ್ಯಾಪಿಟಲ್‌ಮೈಂಡ್ ಕಂಪನಿ ಸಿಇಒ ದೀಪಕ್ ಶೆಣೈ ಕೂಡ ಚರ್ಚೆಗೆ ಧುಮುಕಿದರು ಮತ್ತು ಹೆಚ್ಚಿನ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಹೆಸರುವಾಸಿಯಾಗಿರುವ ಮುಂಬೈನಲ್ಲಿ ಈ ಮನೆಗಳನ್ನು ಮಾರಾಟ ಮಾಡಿದರೆ ಏನಾಗುತ್ತದೆ ಎಂದು ಊಹಿಸಿದರು. ಮುಂಬೈನಲ್ಲಿ ಮಾರಾಟ ಮಾಡುವುದಾದರೆ ಪ್ರತಿ ಮನೆಗೆ 5 ಕೋಟಿ ರೂ. ತಗುಲುತ್ತದೆ ಎಂದರು. (ಏಜೆನ್ಸೀಸ್​)

    ಇಂಗ್ಲೆಂಡ್​ ವಿರುದ್ಧದ ಉಳಿದ 3 ಟೆಸ್ಟ್​ ಪಂದ್ಯಗಳಿಗೂ​ ಕೊಹ್ಲಿ ಅಲಭ್ಯ: ಬಿಸಿಸಿಐ ಕೊಟ್ಟ ಕಾರಣ ಹೀಗಿದೆ…

    ದೇಶ ವಿಭಜನೆ ಮಾಡುವ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎಂದಿದ್ದೇನೆ: ಕೆ.ಎಸ್​. ಈಶ್ವರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts