ನ್ಯೂಸ್

ಮನೆಯಲ್ಲೇ ಕಡವೆ ಮಾಂಸ ಅಕ್ರಮ ಮಾರಾಟ;ಅಧಿಕಾರಿಗಳು ಬರುತ್ತಿದ್ದಂತೆ ಆರೋಪಿಗಳು ಪರಾರಿ

ಕೊಡಗು:ಅಕ್ರಮವಾಗಿ ನಡೆಯುತ್ತಿದ್ದ ಕಡವೆ ಮಾಂಸ ಮಾರಾಟದ ದಂಧೆಯನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ ಘಟನೆ ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದಲ್ಲಿ ನಡೆದಿದೆ.

ಮಂಗಳವಾರ (ನ.1)ರಂದು ಖಚಿತ ಮಾಹಿತಿ‌ಯ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಹಾತೂರು ಗ್ರಾಮದಲ್ಲಿ ಶೋಧ ಕಾರ್ಯ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ತಮ್ಮ ಮನೆಯಲ್ಲಿಯೇ ಕಡವೆಯನ್ನು ಕೊಂದು ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಬರುವ ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳು ಮಾಂಸವನ್ನು ಅಲ್ಲಿಯೇ ಬಿಟ್ಟು, ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಕಾರ್ಯದಲ್ಲಿ ಸತ್ಯುಂಜಯ, ಶರಣು ಎಂಬುವವರು ಭಾಗಿಯಾಗಿರುವ ಬಗ್ಗೆ ಆರೋಪವಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 60 ಕೆ.ಜಿ ಕಡವೆ ಮಾಂಸವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ತಲೆಮರೆಸಿಕೊಂಡಿರುವ ಆರೋಪಿಗಳ ತನಿಖೆ ಮುಂದುವರೆದಿದೆ.