ಉತ್ತರಾಖಂಡ: ಉತ್ತರಾಖಂಡದ ಆಧ್ಯಾತ್ಮಿಕ ಯಾತ್ರಾ ಸ್ಥಳವಾದ ಋಷಿಕೇಶದಲ್ಲಿ ವಿದೇಶಿ ಪ್ರವಾಸಿಗರೊಬ್ಬರು ಬಿಕಿನಿ ( bikini ) ಧರಿಸಿ ಗಂಗಾನದಿಯಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಕಿನಿ ಧರಿಸಿ ತೊಟ್ಟಿದ್ದ ವಿದೇಶಿ ಮಹಿಳೆಯೊಬ್ಬಳು ಕುತ್ತಿಗೆಗೆ ಹೂವಿನ ಹಾರ ಹಾಕಿಕೊಂಡು ಗಂಗಾ ನದಿಯ ಸ್ನಾನಕ್ಕೆ ಇಳಿಯುತ್ತಾಳೆ.ನಂತರ ಕುತ್ತಿಗೆಯಲ್ಲಿರುವ ಹಾರವನ್ನು ತೆಗೆದು ನೀರಿನಲ್ಲಿ ಹಾಕಿ ಸ್ನಾನ ಮಾಡುತ್ತಾಳೆ. ಇದನ್ನು ವಿಡಿಯೋ ಮಾಡಿಕೊಂಡಿದ್ದಾಳೆ.
ಗಂಗಾ ನದಿಯ ದಡವನ್ನು ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಸಂಕೇತವೆಂದು ಪರಿಗಣಿಸುವವರು ಇದನ್ನು ಸಂಪ್ರದಾಯಕ್ಕೆ ವಿರುದ್ಧ. ಪವಿತ್ರ ಗಂಗಾ ನದಿಯಲ್ಲಿ ಬಿಕಿನಿಯಲ್ಲಿ ಸ್ನಾನ ಮಾಡುವುದು ಸರಿಯೇ ಎಂಬ ಚರ್ಚೆ ಸಾಮಾಜಿಕ ಮಾಧ್ಯಮದಲ್ಲಿ ಬಿಸಿಯಾಗಿದೆ. ಗಂಗಾನದಿಯು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿರುವುದರಿಂದ, ವಿದೇಶಿ ಪ್ರವಾಸಿಗರು ತಮ್ಮ ದೇಶದ ಸಂಸ್ಕೃತಿಗೆ ಅನುಗುಣವಾಗಿ ಉಡುಗೆ ತೊಟ್ಟರೆ ಅವರನ್ನು ಟೀಕಿಸುವುದು ಸರಿಯಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ, ಸ್ಥಳದ ಪಾವಿತ್ರ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸ್ಥಳೀಯರು ಹೇಳುತ್ತಾರೆ.
ಕೆಲವು ನೆಟಿಜನ್‌ಗಳು ಈ ಘಟನೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. "ಪುರುಷರು ಸಹ ಒಳ ಉಡುಪು ಧರಿಸಿ ಗಂಗಾನದಿಯಲ್ಲಿ ಸ್ನಾನ ಮಾಡುತ್ತಾರೆ, ಹಾಗಾದರೆ ಮಹಿಳೆಯರು ಬಿಕಿನಿಯಲ್ಲಿ ಸ್ನಾನ ಮಾಡುವುದರಲ್ಲಿ ಏನು ತಪ್ಪಿದೆ?" ಎಂದು ಅವರು ಕೇಳುತ್ತಾರೆ.
ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಅಧಿಕಾರಿಗಳು ಸೂಚಿಸುತ್ತಿದ್ದಾರೆ. ದೇವಾಲಯಗಳ ಅನನ್ಯತೆಯನ್ನು ರಕ್ಷಿಸಲು ಗಂಗಾ ನದಿಯ ದಡದಲ್ಲಿ ಸ್ನಾನ ಮಾಡಲು ಡ್ರೆಸ್ ಕೋಡ್ ಅಥವಾ ಮಾರ್ಗಸೂಚಿಗಳನ್ನು ತರಬೇಕೆಂಬ ಬೇಡಿಕೆಯೂ ಇದೆ.