ಹರಿಯಾಣ: ಗುರುಗ್ರಾಮದಲ್ಲಿ ವಾಸಿಸುವ ವಿದೇಶಿ ಪ್ರಜೆಗಳು ನಗರದ ರಸ್ತೆಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಸಮುದಾಯ-ಚಾಲಿತ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿದ್ದರು.
ಇದನ್ನೂ ಓದಿ: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ನಿಂದ ವೈಮಾನಿಕ ದಾಳಿ; 3 ಪತ್ರಕರ್ತರು ಸೇರಿದಂತೆ 15 ಮಂದಿ ಬಲಿ| airstrike
ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಗುರುಗ್ರಾಮದಲ್ಲಿ ಪ್ರತಿದಿನ ಸಾವಿರಾರು ಟನ್ ತ್ಯಾಜ್ಯ ಕಂಡುಬರುತ್ತದೆ. ಅದರಲ್ಲಿ ಹೆಚ್ಚಿನವು ಬೀದಿಗಳು, ಖಾಲಿ ಜಾಗಗಳು ಮತ್ತು ಮಳೆನೀರಿನ ಚರಂಡಿಗಳಲ್ಲಿಯೇ ಸೇರಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಪುರಸಭೆಯನ್ನು ನಂಬಿ ಕಾಯುವ ಬದಲು ತಾವೇ ಸ್ವಚ್ಛತಾ ಕ್ರಮ ಕೈಗೊಂಡಿದ್ದಾರೆ. ಸೆರ್ಬಿಯಾ ಮತ್ತು ಫ್ರಾನ್ಸ್‌ನ ವಲಸಿಗರು ಸೇರಿದಂತೆ ಅಲ್ಲಿನ ಸ್ವಯಂಸೇವಕರು ಸ್ಥಳೀಯ ನಿವಾಸಿಗಳೊಂದಿಗೆ ಕಸವನ್ನು ತೆರವುಗೊಳಿಸಿದ್ದಾರೆ.
ಸರ್ಬಿಯಾದ ಪ್ರಜೆ ಲಾಜರ್ ನೇತೃತ್ವದ ಈ ಅಭಿಯಾನದಲ್ಲಿ ಫ್ರಾನ್ಸ್, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿವಿಧ ದೇಶಗಳ ಸ್ವಯಂಸೇವಕರು ಒಳಗೊಂಡಿದ್ದರು. ತ್ಯಾಜ್ಯದ ರಾಶಿಗಳಿಂದ ತುಂಬಿದ್ದ ಈ ಸ್ಥಳವನ್ನು ಸ್ವಚ್ಛವಾಗಿಡುವ ಬಗ್ಗೆ ಸಂದೇಶವನ್ನು ನೀಡುವ ಸಲುವಾಗಿ ಈ ಕ್ರಮ ಕೈಗೊಂಡಿದ್ದರು.
ಈ ಬಗ್ಗೆ ಗಾರ್ಡನ್ ಎಸ್ಟೇಟ್‌ನ ಫ್ರೆಂಚ್ ನಿವಾಸಿ ಮ್ಯಾಥಿಲ್ಡೆ ಆರ್ ಮಾತನಾಡಿದ್ದು, ಇದು ಒಂದು ಸಾಂಕೇತಿಕ ಶುಚಿಗೊಳಿಸುವ ದಿನದ ಬಗ್ಗೆ ಅಲ್ಲ. ಇದು ಜವಾಬ್ದಾರಿಯ ಸಂಸ್ಕೃತಿಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ. ಇಲ್ಲಿ ಪ್ರತಿಯೊಬ್ಬ ನಿವಾಸಿ, ಸ್ಥಳೀಯ ಅಥವಾ ವಲಸಿಗರು ಇಲ್ಲಿ ಕಸವನ್ನು ಎಸೆಯಬೇಡಿ, ನಗರವು ಸ್ವಚ್ಛವಾಗಿರುವುದು ಬಹಳ ಮುಖ್ಯ ಎಂದಿದ್ದಾರೆ.
(ಏಜೆನ್ಸೀಸ್)
ಪುರಸಭೆಯ ಯಂತ್ರೋಪಕರಣಗಳಿಂದ ಮಾತ್ರ ಸ್ವಚ್ಛತೆಯನ್ನು ಸಾಧಿಸಲು ಸಾಧ್ಯವಿಲ್ಲ. ಇದಕ್ಕೆ ಪ್ರತಿಯೊಬ್ಬ ನಾಗರಿಕರ ಸಕ್ರಿಯ ಭಾಗವಹಿಸುವಿಕೆ ಅಗತ್ಯ ಎಂದು ಎಂಸಿಜಿ ಆಯುಕ್ತ ಪ್ರದೀಪ್ ದಹಿಯಾ ಹೇಳಿದ್ದಾರೆ. ಇಂದಿನ ಪ್ರಯತ್ನದಲ್ಲಿ ಅಧಿಕಾರಿಗಳು, ಮತ್ತು ನಿವಾಸಿಗಳು ಒಟ್ಟಾಗಿ ಸೇರಿದಾಗ, ಗುರುಗ್ರಾಮ್ ಅನ್ನು ನಾವೆಲ್ಲರೂ ವಾಸಿಸಲು ಬಯಸುವ ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ಪರಿವರ್ತಿಸಬಹುದು ಎಂಬುದನ್ನು ನೆನಪಿಸುತ್ತದೆ ಎಂದರು.