ಬೆಂಗಳೂರು: ಎಲ್ಲಾ ತರಕಾರಿಗಳನ್ನು ತಾಜಾ ಹುಡುಕುವ ನಾವು ಬೆಳ್ಳುಳ್ಳಿ ಹಾಗೂ ಇರುಳ್ಳಿಯನ್ನು ಮಾತ್ರ ಸಂಗ್ರಹಿಸಿಟ್ಟುಕೊಂಡಿರುತ್ತೇವೆ. ಸಾಮಾನ್ಯವಾಗಿ ಈರುಳ್ಳಿಯನ್ನು ದೀರ್ಘಕಾಲ ಸಂಗ್ರಹಿಸಿಡಲಾಗುತ್ತದೆ. ಆದರೆ ಅವುಗಳನ್ನು ಸಂಗ್ರಹಿಸುವ ವಿಧಾನ ಸರಿಯಾಗಿರಬೇಕು. ನಿರ್ಲಕ್ಷ್ಯ ಮಾಡಿದ್ರೆ ಕೊಳೆಯುತ್ತವೆ. ಹಾಗಾದರೆ ಈರುಳ್ಳಿಯನ್ನು ಹೇಗೆ ಶೇಖರಿಸುವುದು ಎಂಬುದರ ಬಗ್ಗೆ ಇಂದು ತಿಳಿಯೋಣ.
ವೆಜ್ ಆಗಿರಲಿ ಅಥವಾ ನಾನ್ ವೆಜ್ ಆಗಿರಲಿ ಅಡುಗೆಗೆ ಈರುಳ್ಳಿ ಬೇಕೆ..ಬೇಕು ಎನ್ನುವಷ್ಟು ಮಹಿಳೆಯರು ಉಪಯೋಗಿಸುತ್ತಾರೆ. ಹೀಗಾಗಿ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಇರುಳ್ಳಿಯನ್ನು ಮನೆಗೆ ತಂದು ಸಂಗ್ರಹಿಸಿಡಲಾಗುತ್ತದೆ. ಹೀಗಾಗಿ ಅವುಗಳನ್ನು ಸಂಗ್ರಹಿಸುವ ವಿಧಾನ ಸರಿಯಾಗಿರಬೇಕು. ಈರುಳ್ಳಿ ಸಂಗ್ರಹಿಸುವುದು ಹೇಗೆ? ಅದಕ್ಕಾಗಿ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಎಂಬ ಸಂಪೂರ್ಣ ವಿವರಗಳನ್ನು ತಿಳಿಯೋಣ..
2) ಈರುಳ್ಳಿ ಮೃದುವಾದ ಹಾಗೂ ಕಲೆಗಳಿಂದ ಮುಕ್ತವಾಗಿರಬೇಕು. ಮೃದುವಾಗಿದ್ದರೆ ಬೇಗನೆ ಕೊಳೆಯುತ್ತವೆ.
1) ನೀವು ಈರುಳ್ಳಿ ಖರೀದಿಸುವ ಮೊದಲು ನೀವು ಅದರ ಗುಣಮಟ್ಟವನ್ನು ಪರಿಶೀಲಿಸಬೇಕು. ಈರುಳ್ಳಿ ಗಟ್ಟಿಯಾಗಿರಬೇಕು.
3) ಅಡುಗೆಮನೆಯಲ್ಲಿ ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಸಂಗ್ರಹಿಸಬೇಕು. ಈರುಳ್ಳಿಯನ್ನು ತಾಜಾವಾಗಿಡಲು ಯಾವಾಗಲೂ ತಂಪಾದ ಸ್ಥಳದಲ್ಲಿ ಇಡಿ. ಅನೇಕ ಮಂದಿ ಈರುಳ್ಳಿಯನ್ನು ಬೆಚ್ಚಗಿನ ಸ್ಥಳದಲ್ಲಿ ಸಂಗ್ರಹಿಸುತ್ತಾರೆ. ಹೀಗೆ ಮಾಡುವುದರಿಂದ ಈರುಳ್ಳಿ ಬೇಗ ಹಾಳಾಗುತ್ತದೆ. ಆದರೆ ನೀವು ಅದನ್ನು ಕೊಂಚ ತಂಪಾದ ಸ್ಥಳದಲ್ಲಿ ಸಂಗ್ರಹಿಸಿದರೆ, ಈರುಳ್ಳಿ ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.
5) ಪ್ಲಾಸ್ಟಿಕ್ ಚೀಲಗಳಲ್ಲಿ ಈರುಳ್ಳಿ ಇಡುವ ಬದಲು ನೆಟ್ ಬ್ಯಾಗ್ಗಳಲ್ಲಿ ಮತ್ತು ಬಿದಿರಿನ ಬುಟ್ಟಿಗಳಲ್ಲಿ ಸಂಗ್ರಹಿಸಬಹುದು. ನೆಟ್ ಬ್ಯಾಗ್ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ.
6) ಈರುಳ್ಳಿಯನ್ನು ಕೆಲವು ಹಣ್ಣುಗಳು ಮತ್ತು ತರಕಾರಿಗಳಿಂದ ದೂರವಿಡಿ, ಏಕೆಂದರೆ ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ.