ನ್ಯೂಸ್

ಗಣ್ಯರ ಹೆಸರಿನಲ್ಲಿ ವಿವಿಧ ಬ್ಯಾಂಕ್​ಗಳಿಗೆ 50 ಲಕ್ಷ ರೂ. ವಂಚಿಸಿದ ಐವರು ಅಂದರ್!

ನವದೆಹಲಿ: ಸಿನಿಮಾ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರ ವಿವರಗಳನ್ನು ಬಳಸಿಕೊಂಡು ಬ್ಯಾಂಕ್‌ಗಳಿಗೆ 50 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿದ ಆರೋಪದ ಮೇಲೆ ಐವರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ತಂಡ ಮೊದಲು ವಿವಿಧ ಕ್ಷೇತ್ರದ ಗಣ್ಯ ವ್ಯಕ್ತಿಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿತ್ತು. ಬಳಿಕ ಡ್ಯೂಪ್ ಬ್ಯಾಂಕ್‌ಗಳ ಹೆಸರಿನ ನಕಲಿ ಪಾನ್ ಕಾರ್ಡ್‌ಗಳನ್ನು ತಯಾರಿಸುತ್ತಿದ್ದರು. ಇದರ ಸಹಾಯದಿಂದ ಬ್ಯಾಂಕ್​ಗಳಿಗೆ ಹಣ ವಂಚನೆ ಮಾಡುತ್ತಿದ್ದರು ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಎಂಎಸ್ ಧೋನಿ, ಅಭಿಷೇಕ್ ಬಚ್ಚನ್, ಸೋನಮ್ ಕಪೂರ್, ಸಚಿನ್ ತೆಂಡೂಲ್ಕರ್, ಸೈಫ್ ಅಲಿ ಖಾನ್, ಹೃತಿಕ್ ರೋಷನ್, ಆಲಿಯಾ ಭಟ್, ಶಿಲ್ಪಾ ಶೆಟ್ಟಿ ಮತ್ತು ಇತರರ ವಿವರಗಳನ್ನು ಬಳಸಿಕೊಂಡು ಆರೋಪಿಗಳು ಬ್ಯಾಂಕ್‌ಗಳಿಗೆ 50 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎಂದು ಶಹದಾರ ಡಿಸಿಪಿ ರೋಹಿತ್ ಮೀನಾ ಹೇಳಿದ್ದಾರೆ. (ಏಜೆನ್ಸೀಸ್)