More

    ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ರಾಹುಲ್ ಗಾಂಧಿಗೆ ಮನೆ ನೀಡಿ; ಅರ್ಜಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು!

    ವಯನಾಡ್: ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕಾಂಗ್ರೆಸ್‌ನ ಸರ್ವಸದಸ್ಯರ ಅಧಿವೇಶನದಲ್ಲಿ ಮಾತನಾಡುತ್ತಾ, ನನಗೆ ಸ್ವಂತ ಮನೆ ಇಲ್ಲ ಎಂದು ಹೇಳಿದ್ದರು. ಈ ಮಾತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನೇ ಹುಟ್ಟು ಹಾಕಿತ್ತು.

    ಇದೀಗ ರಾಹುಲ್ ಗಾಂಧಿ ಹೇಳಿಕೆಯ ಬೆನ್ನಲ್ಲೇ ವಯನಾಡ್ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪುರಸಭೆಗೆ ತೆರಳಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಹುಲ್ ಗಾಂಧಿಗೆ ಮನೆ ಕೋರಿ ಕಲ್ಪೆಟ್ಟಾ ಪುರಸಭೆಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿ ಬಂದಿದ್ದಾರೆ.

    ಇದನ್ನೂ ಓದಿ: ಸಾಧು ಕೋಕಿಲ ಕೆಪಿಸಿಸಿ ಸಾಂಸ್ಕೃತಿಕ ಘಟಕದ ನೂತನ ಅಧ್ಯಕ್ಷ; ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ತುಂಬುತ್ತಾರೆ ಎಂದ ಡಿಕೆಶಿ

    ಸಂಸದ ರಾಹುಲ್ ಗಾಂಧಿಗೆ ಸ್ವಂತ ಮನೆ ಹೊಂದಲು ವಯನಾಡ್ ಕ್ಷೇತ್ರ ಸೂಕ್ತವಾದ ಸ್ಥಳ. ಕಾರಣ, ಅವರು ತಮ್ಮ ರಜೆ ಕಳೆಯಲು ಆಗಾಗ್ಗೆ ಇಲ್ಲಿಗೆ ಬರುತ್ತಿರುತ್ತಾರೆ ಎಂದು ಬಿಜೆಪಿ ಕಾರ್ಯಕರ್ತ ಕೆ.ಪಿ.ಮಧು ಲೇವಡಿ ಮಾಡಿದ್ದಾರೆ.

    “ಅಂದು ಮನೆಯಲ್ಲಿ ವಿಚಿತ್ರ ವಾತಾವರಣವಿತ್ತು. ನಾನು ಅಮ್ಮನ ಬಳಿ ಹೋಗಿ ಏನಾಯಿತು ಎಂದು ಕೇಳಿದೆ. ನಾವು ಮನೆಯಿಂದ ಹೊರಹೋಗುತ್ತಿದ್ದೇವೆ ಎಂದರು.” ಅದು ನಮ್ಮ ಮನೆ ಎಂದು ಅಂದುಕೊಂಡಿದ್ದೆ. ಹೀಗಾಗಿ ನಾವು ನಮ್ಮ ಮನೆಯನ್ನು ಯಾಕೆ ಬಿಡುತ್ತಿದ್ದೇವೆ ಎಂದು ಕೇಳಿದೆ. ಆಗ ನನ್ನ ತಾಯಿ ನನಗೆ ಮೊದಲ ಬಾರಿಗೆ ಇದು ನಮ್ಮ ಮನೆ ಅಲ್ಲ, ಹೀಗಾಗಿ ನಾವು ಇದನ್ನು ಬಿಟ್ಟು ಹೋಗಬೇಕು ಎಂದು ಹೇಳಿದರು ಎಂದು ಕಾಂಗ್ರೆಸ್‌ನ ಸರ್ವಸದಸ್ಯರ ಅಧಿವೇಶನದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ ಹೇಳಿದ್ದರು.

    ಮುಂದೆ ಎಲ್ಲಿಗೆ ಹೋಗುತ್ತೇವೆ ಎಂದು ಕೇಳಿದಾಗ, “ನನಗೆ ಗೊತ್ತಿಲ್ಲ” ಎಂದು ಅಮ್ಮ ಹೇಳಿದ್ದರು. ಇದು ನಮ್ಮ ಮನೆ ಎಂದು ಭಾವಿಸುತ್ತಿದ್ದ ಮನೆ ನಮ್ಮದಲ್ಲ ಎಂದು ಗೊತ್ತಾಗುತ್ತಿದ್ದಂತೆ ಒಂದು ಕ್ಷಣ ಗಾಬರಿಗೊಂಡೆ ಎಂದು ರಾಹುಲ್ ಹೇಳಿದ್ದರು. (ಏಜೆನ್ಸೀಸ್)

    ಇದನ್ನೂ ಓದಿ: ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts