ನ್ಯೂಸ್

ನ್ಯೂಯಾರ್ಕ್​ನಲ್ಲಿ ಏಕಾಏಕಿ ಮುಸುಕುಧಾರಿಯಿಂದ ಗುಂಡಿನದಾಳಿ

mahalakshmihm

ನ್ಯೂಯಾರ್ಕ್: ನ್ಯೂಯಾರ್ಕ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಇಲ್ಲಿನ ಬ್ರೂಕ್ಲಿನ್​ ಸನ್​ಸೆಟ್​ ಪಾರ್ಕ್​​ನ ಸಬ್​ವೇ ನಿಲ್ದಾಣದಲ್ಲಿ ಮುಸುಕುಧಾರಿಯೊಬ್ಬ ಏಕಾಏಕಿ ಜನರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಕೂಡಲೇ ಪೊಲೀಸರು ಧಾವಿಸಿದ್ದು, ಅಷ್ಟರಲ್ಲೇ ಬಂದೂಕುಧಾರಿ ಪರಾರಿಯಾಗಿದ್ದಾನೆ

ಆತನಿಗಾಗಿ ಶೋಧ ನಡೆದಿದ್ದು, ಗುಂಡಿನ ದಾಳಿ ನಡೆಸಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.