ಆಂಧ್ರಪ್ರದೇಶ: ಟಾಲಿವುಡ್ ಸೆನ್ಸೇಷನ್ ನಟ ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಫ್ಯಾಮಿಲಿ ಸ್ಟಾರ್' ಚಿತ್ರವು ಇದೇ ಏಪ್ರಿಲ್ 5, 2024ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಪರಶುರಾಮ್ ಪೆಟ್ಲಾ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಆಪ್ತ ಸ್ನೇಹಿತೆ ನಟಿ ರಶ್ಮಿಕಾ ಮಂದಣ್ಣ ಒಂದು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿಸಿರುವ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಲಭಿಸಿದ್ದೇ ಆದರೂ ಸಿನಿಮಾದ ಒಟ್ಟು ರನ್‌ಟೈಮ್ ಅವಧಿಯೊಳಗೆ ಕೇಳಿಬರುವ ಸುಮಾರು ಐದು ಕೆಟ್ಟ ಪದಗಳನ್ನು ಮ್ಯೂಟ್ ಮಾಡಲು ಸೆನ್ಸಾರ್ ಮಂಡಳಿ ಚಿತ್ರ ತಯಾರಕರಿಗೆ ಸೂಚನೆ ನೀಡಿದೆ ಎಂದು ಇತ್ತೀಚಿನ ಸಿನಿ ವರದಿ ಮಾಹಿತಿ ಹಂಚಿಕೊಂಡಿದೆ.
163 ನಿಮಿಷಗಳ ರನ್‌ಟೈಮ್ ಒಳಗೊಂಡ 'ಫ್ಯಾಮಿಲಿ ಸ್ಟಾರ್' ಸಿನಿಮಾದ ಟ್ರೇಲರ್ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಭಾರೀ ಭರವಸೆ ಮೂಡಿಸಿದ್ದು, ಮೃಣಾಲ್-ವಿಜಯ್ ದೇವರಕೊಂಡ ಜೋಡಿ ತೆರೆಮೇಲೆ ಮೋಡಿ ಮಾಡಲಿದೆಯಾ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಉತ್ತಮ ಆರಂಭವನ್ನು ಹೊಂದುವ ನಿರೀಕ್ಷೆಯಿದೆ. ದಿಲ್ ರಾಜು ನಿರ್ಮಾಣದ ಈ ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ನೀಡಿದ್ದಾರೆ,(ಏಜೆನ್ಸೀಸ್).