ನ್ಯೂಸ್

OTT: ಈ ವರ್ಷದ ಕೊನೆ ವಾರದಲ್ಲಿ ರಿಲೀಸ್​ ಆದ ಐದು ಬಹುನಿರೀಕ್ಷಿತ ಒಟಿಟಿ ಸಿನಿಮಾಗಳಿವು

ಬೆಂಗಳೂರು: 2023ರ ವರ್ಷದಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಂಡ ಭಾರತೀಯ ಚಿತ್ರರಂಗದ ಹಲವು ಬ್ಲಾಕ್​ಬಸ್ಟರ್​ ಸಿನಿಮಾಗಳು ಸೇರಿದಂತೆ ಹಾಲಿವುಡ್​ ಚಿತ್ರಗಳು ಕೂಡ ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ ಪ್ರತಿ ವಾರವೂ ಒಂದೊಂದು ಸಿನಿಮಾಗಳು ತಮ್ಮ ಡಿಜಿಟಲ್​ ಹಕ್ಕುಗಳನ್ನು ಪಡೆದುಕೊಂಡ ಆಯಾ ಒಟಿಟಿ ಪ್ಲಾಟ್​ಫಾರ್ಮ್​ಗೆ ಲಗ್ಗೆಯಿಡಲಿದ್ದು, ನಿಗದಿತ ದಿನಾಂಕದಂದು ಲೈವ್​ ಸ್ಟ್ರೀಮಿಂಗ್​ ಆಗಲಿದೆ.

ಕಳೆದ ತಿಂಗಳು ಬಿಡುಗಡೆಗೊಂಡ ಎಷ್ಟೋ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುವ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದು, ಬಾಕ್ಸ್​ ಆಫೀಸ್​ನಲ್ಲಿಯೂ ನಿರೀಕ್ಷೆ ಮೀರಿದ ಕಲೆಕ್ಷನ್ ಕಂಡಿದೆ. ತಮ್ಮಿಷ್ಟದ ಜಾನರ್​, ಸ್ಟಾರ್​ ನಟರ ಸಿನಿಮಾಗಳನ್ನು ಥಿಯೇಟರ್​ನಲ್ಲೇ ನೋಡಬೇಕು ಎಂದು ಬಯಸುವ ಹಲವರು, ಕೆಲವು ಕಾರಣಗಳಿಂದ ಚಿತ್ರಮಂದಿರಗಳಲ್ಲಿ ನೋಡಲು ಆಗುವುದಿಲ್ಲ. ಇದರಿಂದ ಬೇಸರಗೊಂಡರು, ಒಟಿಟಿಯಲ್ಲಿ ವೀಕ್ಷಿಸಲು ರಿಲೀಸ್​ ಡೇಟ್​ಗಾಗಿ ಕಾತರದಿಂದ ಕಾಯುತ್ತಾರೆ.

ಸದ್ಯ ಪ್ರೇಕ್ಷಕರ ನಿರೀಕ್ಷೆಯಂತೆ ಐದು ಟಾಪ್​ ಸಿನಿಮಾಗಳು ಈ ವರ್ಷದ ಕೊನೆಯ ವಾರದಂದು ಒಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಎಂಟ್ರಿ ಕೊಟ್ಟಿದ್ದು, ಅದರ ಪಟ್ಟಿ ಹೀಗಿದೆ.

1. 12th ಫೇಲ್: ಡಿಸೆಂಬರ್ 29, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

2. ತ್ರೀ ಆಫ್​ ಅಸ್​: ಡಿಸೆಂಬರ್ 29, ನೆಟ್‌ಫ್ಲಿಕ್ಸ್

3. ಶಾಸ್ತ್ರಿ ವಿರುಧ್ ಶಾಸ್ತ್ರಿ: ಡಿಸೆಂಬರ್ 29, ನೆಟ್‌ಫ್ಲಿಕ್ಸ್

4. ಕೀಡಾ ಕೋಲಾ: ಡಿಸೆಂಬರ್ 29, ಆಹಾ

5. ಬರ್ಲಿನ್: ಡಿಸೆಂಬರ್ 29, ನೆಟ್‌ಫ್ಲಿಕ್ಸ್,(ಏಜೆನ್ಸೀಸ್).