Bollywood: ಬಾಲಿವುಡ್ನ ಹೆಸರಾಂತ ನಾಯಕ ನಟ, ನಿರ್ಮಾಪಕ 4 ವರ್ಷದ ನಂತರ ಶಾರುಖ್ ಖಾನ್ ಪಠಾಣ್ ಹಾಗೂ ಜವಾನ್ ಚಿತ್ರಗಳ ಮೂಲಕ ತೆರೆಯ ಮೇಲೆ ಬಂದಿದ್ದು, ಅಭಿಮಾನಿಗನ್ನು ಬೆರಗುಗೊಳಿಸಿದ್ದಾರೆ. ಇನ್ನು ಇವರು ಆ ಸಿನಿಮಾಗಳಲ್ಲಿ ತಮ್ಮ ಸದೃಢವಾದ ಮೈಕಟ್ಟನ್ನು ಹೊಂದಿದ್ದು, ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಶಾರುಖ್ ಇತ್ತೀಚಿನ ಸಂದಶರ್ನವೊಂದರಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ರಹಸ್ಯ ಹಂಚಿಕೊಂಡಿದ್ದಾರೆ.
ಈ ವೇಳೆ ಅವರು ತಮ್ಮ ವಿಶಿಷ್ಟ ನಿದ್ರೆಯ ವೇಳಾಪಟ್ಟಿಯನ್ನು ಬಹಿರಂಗಪಡಿಸಿದ್ದಾರೆ. ನಾನು ಬೆಳಿಗ್ಗೆ 5 ಗಂಟೆಗೆ ಮಲಗುತ್ತೇನೆ ಮತ್ತು ಬೆಳಿಗ್ಗೆ 9-10 ಗಂಟೆಗೆ ಎದ್ದೇಳುತ್ತೇನೆ.ತಡರಾತ್ರಿ ಕೆಲಸ ಮಾಡಿದರೂ ವ್ಯಾಯಾಮ ಮಾಡುವುದನ್ನು ಬಿಡುವುದಿಲ್ಲ. ನಂತರ 2 ಗಂಟೆಗಳ ತನಕ ಜಿಮ್ಗೆ ಹೋಗುತ್ತೇನೆ ಎಂದರು.
ಊಟದ ವಿಚಾರಕ್ಕೆ ಬಂದರೆ ನಾನು ಗ್ರಿಲ್ ಚಿಕನ್, ಲೀನ್ ಮಾಂಸ, ಬೇಳೆಕಾಳುಗಳು, ಮೊಟ್ಟೆಯ ಬಿಳಿಭಾಗವನ್ನು ಸೇವಿಸುತ್ತೇನೆ. ಅಗತ್ಯವಿದ್ದಾಗ ಬಿಳಿ ಬ್ರೆಡ್, ಬಿಳಿ ಅನ್ನ, ಸಿಹಿತಿಂಡಿಗಳನ್ನು ಸೇವಿಸುತ್ತೇನೆ ಇನ್ನು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿದ್ದೇನೆ ಎಂದರು.
ಆಹಾರದ ವಿಚಾರಕ್ಕೆ ಬಂದರೆ ಶಾರುಖ್ ಅವರು ಸೆಟ್ನಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದಿಲ್ಲ. ಬದಲಿಗೆ ಮನೆಯಿಂದಲೇ ತಯಾರಿಸಿದ ಆಹಾರವನ್ನು ಸೇವಿಸುತ್ತಾರೆ. ಸಾಮಾನ್ಯವಾಗಿ ಮಧ್ಯಾನ್ಹದ ಊಟದಲ್ಲಿ ಮೀನು, ತಂದೂರಿ ಚಿಕನ್ ಜೊತೆಗೆ ಮೊಳಕೆ ಕಾಳುಗಳು, ತರಕಾರಿಗಳನ್ನು ಒಳಗೊಂಡಿರುತ್ತದೆ. ಇನ್ನು ಕೆಲವೊಮ್ಮೆ ಮಟನ್ ಸೇವಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಮಾಡುತ್ತಾ ತಂದೂರಿ ಚಿಕನ್ಗೆ ನಾನು ವ್ಯಸನಿಯಾಗಿದ್ದೇನೆ. ಇದನ್ನು ಸೇವಿಸುವುದರಿಂದ ನಾನು ಆರಾಮವಾಗಿರುತ್ತೇನೆ. ವರ್ಷದ 365 ದಿನನೂ ತಿನ್ನಲು ಬಯಸುತ್ತೇನೆ ಎಂದರು. ಜಂಕ್ಫುಡ್ಗಳ ಮೇಲೆ ಆಸಕ್ತಿ ಕಡಿಮೆ ಇದ್ದರೂ ಕೆಲವೊಮ್ಮೆ ಐಸ್ಕ್ರೀಂ ಅನ್ನು ಸೇವಿಸುತ್ತೇನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)