ನ್ಯೂಸ್

ತಲೆ, ಕಣ್ಣು, ಮೂಗು ಇಲ್ಲದ ಮಾನವನ ಮೂತಿ? ಇದು ಪ್ರಕೃತಿಯ ವೈಚಿತ್ರ್ಯ ಹೌದು ಸ್ವಾಮಿ!

vinaymk1969

ನವದೆಹಲಿ: ಪ್ರಕೃತಿಯ ವೈಚಿತ್ರ್ಯಗಳೇ ಅಂತದ್ದು. ಇದರಲ್ಲಿ ಅದೇನೇನೋ ಅಚ್ಚರಿಗಳು ಅಡಗಿರುತ್ತವೆ. ಅವನ್ನು ಗಮನಿಸಿ, ಆಸ್ವಾದಿಸುವ ಕಣ್ಣು ಇರಬೇಕಷ್ಟೇ. ಆದರೂ, ತಲೆ, ಕಣ್ಣು, ಮೂಗು ಇಲ್ಲದ ಮಾನವನ ಮೂತಿಯನ್ನು ತೋರಿಸುತ್ತಾ ಏನೇನೋ ಮಾತನಾಡುತ್ತಿದ್ದಾರಲ್ಲಾ ಎಂದು ಗೊಣಗಿಕೊಳ್ಳಬೇಡಿ.

ಇದು ನಿಜಕ್ಕೂ ಅಚ್ಚರಿಯ ಸಂಗತಿಯೇ. ಇದು ಮಾನವನ ರೀತಿಯ ಬಾಯಿ, ತುಟಿ ಮತ್ತು ಹಲ್ಲುಗಳನ್ನು ಹೊಂದಿರುವ ವಿಚಿತ್ರವಾದ ಮೀನಿನ ಚಿತ್ರ ಇದು. ಮಲೇಷ್ಯಾದ ಮೀನುಗಾರರ ಬಲೆಗೆ ಬಿದ್ದಿರುವ ಮೀನು ಇದು. ಇದನ್ನು ಟ್ರಿಗ್ಗರ್​ ಫಿಶ್​ ಎಂದು ಕರೆಯಲಾಗುತ್ತದೆ.

ಟ್ರಿಗ್ಗರ್​ ಫಿಶ್​ನಲ್ಲಿ 40 ಪ್ರಬೇಧಗಳಿವೆ. ಎಲ್ಲ ಪ್ರಬೇಧಗಳಲ್ಲೂ ಮಾನವನ ಬಾಯಿಯನ್ನು ಹೋಲುವ ರೀತಿ ತುಟಿ, ಹಲ್ಲುಗಳಿರುತ್ತವೆ. ಅಂದರೆ ಗಟ್ಟಿಯಾದ ಚಿಪ್ಪುಗಳನ್ನು ಪುಡಿಗಟ್ಟಿಕೊಂಡು ತಿನ್ನುವಷ್ಟು ಈ ಹಲ್ಲುಗಳು ಗಟ್ಟಿಯಾಗಿರುತ್ತವೆ.

ಇವುಗಳ ದೇಹ ಅಂಡಾಕಾರವಾಗಿದ್ದು, ದೊಡ್ಡ ತಲೆಗಳನ್ನು ಹೊಂದಿರುತ್ತವೆ. ಈ ಸಮುದ್ರಜೀವಿಯ ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಲೇ ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಹಲವು ಮೀಮ್​ಗಳನ್ನೂ ಮಾಡಿ, ಪ್ರಕಟಿಸಲಾಗುತ್ತಿದೆ. ಮಾನವಂತೆ ವಿಕಸನ ಹೊಂದುತ್ತಿರುವ ಮೀನು ಇದಾಗಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.