ನ್ಯೂಸ್

ಶ್ರೀಮುರಳಿ ಬರ್ತ್​​ಡೇಗೆ ‘ಮದಗಜ’ ಕಡೆಯಿಂದ ಸಿಗಲಿದೆ ಈ ಉಡುಗೊರೆ

ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸುತ್ತಿರುವ ಮದಗಜ ಸಿನಿಮಾ ಇದೀಗ ಸುದ್ದಿಯಲ್ಲಿದೆ. ಈಗಾಗಲೇ ಒಂದಷ್ಟು ಪೋಸ್ಟರ್ ಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಶ್ರೀಮುರಳಿ, ಇದೀಗ ಫಸ್ಟ್​ಲುಕ್ ಟೀಸರ್ ಮೂಲಕ ಆಗಮಿಸಲಿದ್ದಾರೆ.

ಅಂದರೆ, ಇದೇ 17ಕ್ಕೆ ಶ್ರೀಮುರಳಿ ಜನ್ಮದಿನ. ಆ ನಿಮಿತ್ತ ಚಿತ್ರತಂಡ ಟೀಸರ್​ ಸಿದ್ಧಪಡಿಸಿದ್ದು, ಅವರ ಬರ್ತ್​ಡೇ ದಿನದಂದು ಬಿಡುಗಡೆ ಆಗಲಿದೆ. ಅಯೋಗ್ಯ ಮಹೇಶ್​ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ.

ಇನ್ನು ಜಗಪತಿ ಬಾಬು ಈ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದು, ಇನ್ನೇನು ಕೊನೇ ಹಂತದ ಶೂಟಿಂಗ್​ನಲ್ಲಿ ತಂಡ ಕಾರ್ಯೋನ್ಮುಖವಾಗಿದೆ. ಈಗಾಗಲೇ ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ಮುಗಿಸಿಕೊಂಡಿದ್ದು, ರಾಬರ್ಟ್​ ಸಿನಿಮಾ ನಿರ್ಮಾಣ ಮಾಡಿರುವ, ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.