ನ್ಯೂಸ್

Bigg Boss ಇತಿಹಾಸದಲ್ಲೇ ಇದೇ ಮೊದಲು; ಕ್ಯಾಪ್ಟನ್​ ಸೇರಿದಂತೆ ಎಲ್ಲರೂ ನಾಮಿನೇಟ್

ಬೆಂಗಳೂರು: ಕನ್ನಡ ಕಿರುತೆರಯ ಜನಪ್ರಿಯ ರಿಯಾಲಿಟಿ ಶೋ ಬಿಗ್​​​ಬಾಸ್​ (Bigg Boss) 11ನೇ ಆವೃತ್ತಿ (11th Season) ಆರಂಭವಾಗಿ ಒಂದು ವಾರ ಕಳೆದಿದ್ದು, ಸ್ಫರ್ಧಿಗಳ ನಡುವಿನ ಕಿತ್ತಾಟ ಹಾಗೂ ಎಡವಟ್ಟಿನಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಈ ಬಾರಿ ಸ್ವರ್ಗ-ನರಕ (hell-Heaven) ಥೀಮ್​ನಲ್ಲಿ ಕಾರ್ಯಕ್ರಮ ರೂಪುಗೊಂಡಿದ್ದು, ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಬಿಗ್​ಬಾಸ್​ (Bigg Boss) ಮನೆಯಲ್ಲಿ ಕೆಲವು ಸ್ಫರ್ಧಿಗಳು ಮಾಡಿದ ಎಡವಟ್ಟಿನಿಂದಾಗಿ ಇಡೀ ಮನೆ ಶಿಕ್ಷೆಗೆ ಒಳಗಾಗಿರುವ ಘಟನೆ ನಡೆದಿದ್ದು, ಬಿಗ್​ಬಾಸ್ (Bigg Boss) ಇತಿಹಾಸದಲ್ಲಿ ನಡೆಯದೇ ಇರುವ ಘನಘೋರ ತಪ್ಪು ಎಂದು ಹೇಳಲಾಗಿದೆ.

ಬಿಗ್​ಬಾಸ್​ (Bigg Boss) ಶೋ ಎಂದರೆ ಕಟ್ಟುನಿಟ್ಟಾದ ನಿಯಮಗಳು ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಬಿಗ್​ಬಾಸ್​ ಮನೆಗೆ ಸ್ಫರ್ಧಿಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಪಾಲಿಸದಿದ್ದಲ್ಲಿ ಸ್ಫರ್ಧಿಗಳನ್ನು (Contestants) ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಇದರ ಹೊರತಾಗಿಯೂ ಸ್ಫರ್ಧಿಗಳು ತಪ್ಪು ಮಾಡಿ ಶಿಕ್ಷೆಗೆ ಗುರಿಯಾಗುವ ಹಲವು ಪ್ರಸಂಗಗಳು ನಮ್ಮ ಕಣ್ಣ ಮುಂದಿವೆ. ಇದೀಗ ಬಿಗ್​ಬಾಸ್ (Bigg Boss)​ ಇತಿಹಾಸದಲ್ಲೇ ನಡಯದೆ ಇರುವ ಘನಘೋರ ತಪ್ಪು ನಡೆದು ಹೋಗಿದ್ದು, ಕೆಲವೇ ಕೆಲವು ಸ್ಫರ್ಧಿಗಳು (Contestants) ಮಾಡಿದ ತಪ್ಪಿನಿಂದಾಗಿ ಎಲ್ಲರೂ ನಾಮಿನೇಟ್ (Nominate) ಮಾಡಿ ಬಿಗ್​ಬಾಸ್​ ಆದೇಶಿಸಿದ್ದಾರೆ.

ದಿನದ ಆರಂಭದಲ್ಲಿ ಬಿಗ್​ಬಾಸ್ (Bigg Boss) ನಾಮಿನೇಷನ್​ಗೆ ಚಟುವಟಿಕೆ (Activity) ಒಂದನ್ನು ನೀಡಿದ್ದರು. ಈ ಚಟುವಟಿಕೆಯಲ್ಲಿ ತ್ರಿವಿಕ್ರಂ, ಅನುಷಾ, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ ಹಾಗೂ ರಂಜಿತ್ ನಾಮಿನೇಟ್ ಆಗಿದ್ದು, ಉಳಿದ ಸ್ಪರ್ಧಿಗಳು (Contestants) ನಿಟ್ಟುಸಿರು ಬಿಟ್ಟಿದ್ದರು. ಆದರೆ, ಸ್ಫರ್ಧಿಗಳಾದ ಮಸನಾ ಸೇರಿದಂತೆ ಕೆಲವರು ಮಾಡಿದ ತಪ್ಪಿನಿಂದಾಗಿ ಕ್ಯಾಪ್ಟನ್​ ಸೇರಿದಂತೆ ಮನೆಯ ಪ್ರತಿಯೊಬ್ಬ ಸದಸ್ಯ ನಾಮಿನೇಟ್(Nominate)​ ಆಗಿದ್ದು, ಬಿಗ್​ಬಾಸ್​ ಇತಿಹಾಸದಲ್ಲೇ ಇದೇ ಮೊದಲು ಎಂದು ಹೇಳಲಾಗಿದೆ.

ನಿಯಮಗಳ ಪ್ರಕಾರ ಬಿಗ್​ಬಾಸ್​ನಲ್ಲಿ (Bigg Boss) ಟಾಸ್ಕ್​ (Task) ನೀಡುವ ಮುನ್ನ ಬ್ಲೈಂಡ್ಸ್ (Blinds) ಇಳಿಸಲಾಗುತ್ತದೆ. ಬಿಗ್​ಬಾಸ್​ ನಿಯಮದ ಪ್ರಕಾರ ಯಾರೂ ಹೊರಗೆ ಇಣುಕಿ ನೋಡುವಂತಿಲ್ಲ. ಇದಕ್ಕೆ ಕಾರಣ ಅಲ್ಲಿ ಟಾಸ್ಕ್​ಗೆ ಸಿದ್ಧತೆ ಮಾಡುತ್ತಾ ಇರಲಾಗುತ್ತದೆ. ಟಾಸ್ಕ್​ ಹೇಗಿರುತ್ತದೆ ಎಂಬುದು ಮೊದಲೇ ಗೊತ್ತಾದರೆ ಸ್ಪರ್ಧಿಗಳು ಮಾನಸಿಕವಾಗಿ ರೆಡಿ ಆಗುತ್ತಾರೆ. ಈ ಕಾರಣದಿಂದ ಇದಕ್ಕೆ ಅನುಮತಿ ಇಲ್ಲ. ಆದರೆ, ಮಾನಸಾ ಸೇರಿದಂತೆ ಕೆಲವರು ಬ್ಲೈಂಡ್ಸ್​ನ ಸರಿಸಿ ಹೊರಗೆ ಇಣುಕಿ ನೋಡಿದ್ದಾರೆ. ಈ ವಿಚಾರ ಬಿಗ್​ಬಾಸ್​ ಗಮನಕ್ಕೆ ಬಂದಿದ್ದು, ಕೆಂಡಾಮಂಡಲರಾಗಿದ್ದಾರೆ.

ಬ್ಲೈಂಡ್ಸ್ (Blinds) ಡೌನ್ ಆಗಿದ್ದಾಗ ಆಚೆಗೆ ಇಣುಕಿ ನೋಡುವಂತಿಲ್ಲ ಎಂಬುದು ಮನೆಯ ತುಂಬಾ ಮುಖ್ಯವಾದ ಮೂಲ ನಿಯಮ (Rule). ಈಗಷ್ಟೇ ಆ ನಿಯಮವನ್ನು ಕೆಲ ಸದಸ್ಯರು ಉಲ್ಲಂಘಿಸಿದ್ದಾರೆ. ಈ ವಿಚಾರ ಮನೆಯ ಕ್ಯಾಪ್ಟನ್ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಇನ್ನಷ್ಟು ಶೋಚನೀಯ. ನಿಮ್ಮೆಲ್ಲರ ವರ್ತನೆಯಿಂದ ಬಿಗ್​​ಬಾಸ್​ಗೆ (Bigg Boss) ನೋವಾಗಿದೆ. ಬಿಗ್​ಬಾಸ್​ ನಿಯಮಗಳನ್ನು (Bigg Boss Rules) ಪಾಲಿಸದ ನಿಮಗೆ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲ. ಈ ಕ್ಷಣದಿಂದ ನಿಮ್ಮೆಲ್ಲರನ್ನೂ ನಾಮಿನೇಟ್​ ಮಾಡಲಾಗುತ್ತಿದೆ ಎಂದು ಆದೇಶ ನೀಡಿದರು.

ಬಿಗ್​​ಬಾಸ್ (Bigg Boss) ಇತಿಹಾಸದಲ್ಲಿ ಯಾವ ಕ್ಯಾಪ್ಟನ್ ಕೂಡ ನಾಮಿನೇಟ್ ಆಗಿರಲಿಲ್ಲ. ಆದರೆ, ಹಂಸ (Hamsa) ಅವರೇ ನಿಮ್ಮ ಇಮ್ಯೂನಿಟಿಯನ್ನು ಹಿಂಪಡೆದು ನೇರವಾಗಿ ನಾಮಿನೇಟ್ ಮಾಡಿದ್ದೇವೆ. ಇದು ಇತಿಹಾಸ. ಅಭಿನಂದನೆಗಳು ಎಂದು ಬಿಗ್​ಬಾಸ್​ (Bigg Boss) ಘೋಷಣೆ ಮಾಡಿದರು. ಒಟ್ಟಿನಲ್ಲಿ ಆರಂಭದಲ್ಲೇ ವಿವಾದಗಳಿಂದಲೇ (Controversy) ಸಾಕಷ್ಟು ಸದ್ದು ಮಾಡುತ್ತಿರುವ ಬಿಗ್​ಬಾಸ್​ (Bigg Boss) ಮುಂದಿನ ದಿನಗಳಲ್ಲಿ ಸ್ಫರ್ಧಿಗಳ ಕಿತ್ತಾಟ ಹಾಗೂ ಎಡವಟ್ಟಿನಿಂದ ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕಿದೆ.