ಹೈದರಾಬಾದ್: ನಿರ್ದೇಶಕ ಪ್ರಶಾಂತ್ ವರ್ಮಾ 'ಹನುಮಾನ್' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಯಶಸ್ಸಿನ ಅಂಗವಾಗಿ, ಅವರು ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ ಮತ್ತು ಚಿತ್ರದ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ‘I.N.D.I.A’ ಕೂಟದಿಂದ ಹೊರಬಂದ ಮಮತಾ: ‘ಕೈ’ಗೆ ಬಿಗ್ ಶಾಕ್ -ಲೋಕಸಭಾ ಚುನಾವಣೆಯಲ್ಲಿ ಏಕಾಂಗಿ ಹೋರಾಟ!
'ಚಿತ್ರದಲ್ಲಿ ವಿಭೀಷಣನ ಪಾತ್ರ ಬಹಳ ಮಹತ್ವದ್ದಾಗಿದೆ. ಈ ಪಾತ್ರಕ್ಕೆ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಲು ನಾನು ಮೊದಲು ಬಯಸಿದ್ದೆ. ಆ ಸಮಯದಲ್ಲಿ ಅವರು 'ಕಾಂತಾರ'ದಲ್ಲಿ ಬ್ಯುಸಿಯಾಗಿದ್ದರು. ಅವರು ಮುಂದೊಂದು ದಿನ ಖಂಡಿತವಾಗಿಯೂ ನನ್ನ ಸಿನಿಮಾದಲ್ಲಿ ನಟಿಸುತ್ತಾರೆ' ಎಂದು ಹೇಳಿದರು.
ಭವಿಷ್ಯದಲ್ಲಿ ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ರಾಮಾಯಣವನ್ನು ನಿರ್ದೇಶಿಸಲಿದ್ದರೆ, ನಾನು ಆ ಯೋಜನೆಯನ್ನು ಮಾಡುತ್ತೇನೆ. ನಮ್ಮ ಸಿನಿಮಾಗಳಿಂದ ಭಾರತೀಯ ಚಿತ್ರರಂಗದ ಕೀರ್ತಿ ಹೆಚ್ಚಿಸುವ ಆಸೆ ಇದೆ. ಇಲ್ಲಿನ ಚಿತ್ರಗಳ ಬಿಡುಗಡೆ ಬಗ್ಗೆ ಹಾಲಿವುಡ್ ಮಾತನಾಡಲಿದೆ ಎಂದರು.
ತೇಜ ಸಜ್ಜ ನಾಯಕನಾಗಿ ನಟಿಸಿರುವ ಚಿತ್ರ 'ಹನುಮಾನ್'. ಇದು ಪ್ರಶಾಂತ್ ವರ್ಮಾ ಅವರ ಸಿನಿಮಾವಾಗಿದ್ದು, ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅಮೃತಾ ಅಯ್ಯರ್, ವಿನಯ್ ರಾಯ್ ಮತ್ತು ವರಲಕ್ಷ್ಮಿ ಶರತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ 'ಜೈ ಹನುಮಾನ್' ತೆರೆಗೆ ಬರಲಿದೆ. ಇದರ ಪ್ರಿ-ಪ್ರೊಡಕ್ಷನ್ ಕೆಲಸಗಳು ಇತ್ತೀಚೆಗಷ್ಟೇ ಆರಂಭವಾಗಿದೆ.