ಬೆಂಗಳೂರು: ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ನ (Bigg Boss) 11 ಆವೃತ್ತಿ ಶುರುವಾಗಿ ಒಂದು ವಾರಗಳಾಗಿದ್ದು, ಈ ಬಾರಿ ಸ್ವರ್ಗ-ನರಕ (Hell-Heaven) ಎಂಬ ಥೀಮ್ನಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈಗಾಗಲೇ ಸ್ಫರ್ಧಿಗಳ ನಡುವಿನ ಜಗಳದ ವಿಚಾರವಾಗಿ ಹೆಚ್ಚು ಸದ್ದು ಮಾಡಿದ್ದ ಬಿಗ್ಬಾಸ್ ಇದೀಗ ಎಲಿಮಿನೇಷನ್ (Eliminate) ವಿಚಾರವಾಗಿಯೂ ಎಲ್ಲರ ಗಮನ ಸೆಳೆಯುತ್ತಿದೆ.
ಬಿಗ್ ಬಾಸ್ (Bigg Boss) 11ನೇ ಆವೃತ್ತಿಯ ಮೊದಲ ವಾರದ ನಾಮಿನೇಷನ್ನಲ್ಲಿ (Nomination) ಗೌತಮಿ ಜಾಧವ್, ಭವ್ಯಾ ಗೌಡ, ಮಾನಸ ಸಂತೋಷ್, ಹಂಸ ಪ್ರತಾಪ್, ಚೈತ್ರಾ ಕುಂದಾಪುರ, ಯಮುನಾ ಶ್ರೀನಿಧಿ, ಮೋಕ್ಷಿತಾ ಪೈ, ಶಿಶಿರ್ ಶಾಸ್ತ್ರಿ, ಜಗದೀಶ್ ನಾಮಿನೇಟ್ ಆಗಿದ್ದರು. ಈ ಪೈಕಿ ಗೌತಮಿ, ಭವ್ಯಾ ಹಾಗೂ ಮನಸ ಅವರನ್ನು ಶನಿವಾರದ ಸಂಚಿಕೆಯಲ್ಲಿ ಸೇವ್ ಮಾಡಲಾಗಿದೆ. ಹಂಸ ಪ್ರತಾಪ್, ಚೈತ್ರಾ ಕುಂದಾಪುರ, ಯಮುನಾ ಶ್ರೀನಿಧಿ, ಮೋಕ್ಷಿತಾ ಪೈ, ಶಿಶಿರ್ ಶಾಸ್ತ್ರಿ, ಜಗದೀಶ್ ಡೇಂಜರ್ ಜೋನ್ನಲ್ಲಿದ್ದು, ಈ ಪೈಕಿ ಒಬ್ಬರು ಎಲಿಮಿನೇಟ್ ಆಗಿದ್ಧಾರೆ ಎಂದು ವರದಿಯಾಗಿದೆ.
ನಟಿ ಯಮುನಾ ಶ್ರೀನಿಧಿ, ಚೈತ್ರಾ ಕುಂದಾಪುರ ಹಾಗೂ ಜಗದೀಶ್ ಪೈಕಿ ಒಬ್ರು ಎಲಿಮಿನೇಟ್ ಆಗಿದ್ದು, ಬಲ್ಲ ಮೂಲಗಳ ಪ್ರಕಾರ ನಟಿ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿರುವ ಮೊದಲ ಕಂಟೆಸ್ಟಂಟ್ ಎಂದು ಹೇಳಲಾಗಿದೆ. ಅತಿ ಕಡಿಮೆ ವೋಟ್ ಪಡೆದಿರುವ ಕಾರಣ ಯಮುನಾ ಶ್ರೀನಿಧಿ (Yamuna Srinidhi) ಅವರನ್ನು ಎಲಿಮಿನೇಟ್ (Eliminate) ಮಾಡಲಾಗಿದೆ. ಆದರೆ, ಅಂತಿಮವಾಗಿ ಇಂದಿನ ಸಂಚಿಕೆ ಪ್ರಸಾರವಾಗುವರೆಗೂ ನಾವು ಕಾಯಬೇಕಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (Bigg Boss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಪಾಪ್ಯೂಲರ್ ಆಗಿದೆ.