ನ್ಯೂಸ್

ಪತ್ತೆಯಾಯ್ತು ಹೊಸ ವೈರಸ್​​; ಅಮೆರಿಕ ವ್ಯಕ್ತಿಯಲ್ಲಿ ಕಾಣಿಸಿತು ಮಂಕಿಪಾಕ್ಸ್​! ಏನಿದರ ಲಕ್ಷಣ

mahalakshmihm

ನ್ಯೂಯಾರ್ಕ್​: ಕರೊನಾ ಸೋಂಕು, ಆನಂತರ ಒಮಿಕ್ರಾನ್​​ ಹೀಗೆ ಸಾಂಕ್ರಾಮಿಕ ರೋಗಗಳಿಗೇನು ಕಡಿಮೆಯಿಲ್ಲ. ಎರಡು ವರ್ಷಗಳಿಂದ ಶತಮಾನದಲ್ಲೇ ಕಾಣದ ಬಿಕ್ಕಟ್ಟಿನಿಂದ ಹೊರ ಬರುತ್ತಿರುವಾಗಲೇ ಮತ್ತೊಂದು ಸೋಂಕು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.

ಹೀಗೊಂದು ಪ್ರಕರಣ ಅಮೆರಿಕದಲ್ಲಿ ದಾಖಲಾಗಿರುವುದು ವರದಿಯಾಗಿದೆ. ಇದು ಕರೊನಾ ತಳಿಗಳಿಗಿಂತಲೂ ದುಪ್ಪಟ್ಟು ಭೀಕರತೆ ಸೃಷ್ಟಿಸುವ ವೈರಸ್​ ಆಗಿದೆ ಎಂದು ಹೇಳಲಾಗಿದೆ. ಸದ್ಯ ಮೊದಲ ಪ್ರಕರಣ ಅಮೆರಿಕದಲ್ಲಿಕಂಡುಬಂದಿದೆ.

ಇದರ ಹೆಸರು ಮಂಕಿಪಾಕ್ಸ್​​ ಈ ವೈರಸ್​. ವ್ಯಕ್ತಿಯೊಬ್ಬನನ್ನು ಪರೀಕ್ಷೆಗೊಳಪಡಿಸಿದಾಗ ಈ ವೈರಸ್​ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಇನ್ನು ಇದು ಚಿಕನ್​ಪಾಕ್ಸ್​ ರೀತಿಯಲ್ಲೇ ಇರಲಿದ್ದು, ಕೈ ಕಾಲುಗಳ ಮೇಲೆ ಸಣ್ಣ ಗುಳ್ಳೆಗಳು ಬರಲಿದ್ದು, ಹೆಚ್ಚು ಸೆಳೆ ಹಾಗೂ ನೋವು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.

ಇದೂ ಕೂಡ ಕರೊನಾ ಮಾದರಿಯಲ್ಲೇ ಹರಡಲಿದ್ದು, ಸೋಂಕಿಗೊಳಗಾದ ವ್ಯಕ್ತಿ ಮುಖಾಮುಖಿ ಸಂಪರ್ಕ, ಗಾಳಿಯಲ್ಲಿ ವೈರಸ್​ ಹರಡುವಿಕೆ ಹಾಗೂ ಉಸಿರಾಟದ ಹನಿಗಳಿಂದ ರೋಗ ತಗಲುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.ಈ ವ್ಯಕ್ತಿ ಕೆನಡಾದಿಂದ ಬಂದಿದ್ದ ಬೋಸ್ಟನ್​​ ನಗರಕ್ಕೆ ಬಂದಿದ್ದ. ಈ ವೇಳೆ ಕರೊನಾ ಪರೀಕ್ಷೆ ಮಾಡಿಸಲು ತಪಾಸಣೆಗೊಳಪಡಿಸಲಾಗಿತ್ತು. ಆಗ ಈ ಸತ್ಯಾಂಶ ಹೊರಬಂದಿದೆ.

ಸದ್ಯ ಈ ವ್ಯಕ್ತಿಯನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದು ಕರೊನಾ ಅಂತೆಯೇ ಹರಡುತ್ತದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಈ ಬಗ್ಗೆ ಪರೀಕ್ಷೆಗೊಳಪಡಿಸಲಾಗಿದೆ ಎಂದು ಇಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 2003ರಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದವು. ಆನಂತರ ಇದೇ ಮೊದಲ ಬಾರಿಗೆ ಈ ವೈರಸ್​ ಪತ್ತೆಯಾಗಿದೆ.ಪೋರ್ಚುಗಲ್​ನ ಐವರು ಸೇರಿ ಒಟ್ಟು 9 ಮಂದಿಯಲ್ಲಿ ಮಾತ್ರ ಈ ವೈರಸ್​ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)