ನ್ಯೂಸ್

ಕಾಂಚೀಪುರಂನಲ್ಲಿರುವ ಪಟಾಕಿ ಗೋದಾಮಿನಲ್ಲಿ ಸ್ಫೋಟ; 7 ಮಂದಿ ಸಾವು, ಹಲವರಿಗೆ ಗಾಯ

ತಮಿಳುನಾಡು: ಕಾಂಚೀಪುರಂ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದ ಪ್ರಾಣ ಕಳೆದುಕೊಂಡವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಅಲ್ಲದೆ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಜಹೀರ್ ಖಾನ್​ನಂಥ ಎಡಗೈ ವೇಗಿಯ ಅವಶ್ಯಕತೆಯಿದೆ; ಆರ್​.ಅಶ್ವಿನ್

ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ ಸಮಯದಲ್ಲಿ ಸುಮಾರು 30ಕ್ಕೂ ಅಧಿಕ ಮಂದಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಗೋದಾಮಿನಲ್ಲಿದ್ದ ಪಟಾಕಿಗಳು ಸಿಡಿಯಲಾರಂಭಿಸಿದ್ದು, ಸ್ಫೋಟದ ತೀವ್ರತೆಗೆ ಗೋದಾಮು ಕುಸಿದು ಬಿದ್ದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ ಬೀಡು ಬಿಟ್ಟಿದ್ದು, ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. (ಏಜೆನ್ಸೀಸ್) ಇದನ್ನೂ ಓದಿ: ದೂರು ನೀಡಲು ಬಂದಿದ್ದ ಮಹಿಳೆ ಜತೆ ಅಸಭ್ಯ ವರ್ತನೆ ಪ್ರಕರಣ; ಕೊಡಿಗೆಹಳ್ಳಿ ಇನ್ಸ್​ಪೆಕ್ಟರ್ ಅಮಾನತು