ನ್ಯೂಸ್

ಪರ್ಫ್ಯೂಮ್​ ಕಾರ್ಖಾನೆಯಲ್ಲಿ ಅಗ್ನಿ ಅವಘಡ! ಮೂವರು ಕಾರ್ಮಿಕರು ಸಜೀವ ದಹನ, ಕೆಲವರು ಸಿಲುಕಿರುವ ಶಂಕೆ

ಬೆಂಗಳೂರು: ಬೆಂಗಳೂರಿನ ರಾಮಸಂದ್ರದ ಕುಂಬಳಗೋಡಿನಲ್ಲಿರುವ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಯ ಕೆನ್ನಾಲಿಗೆಗೆ ಮೂವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ.

ಪರ್ಫ್ಯೂಮ್​ ತಯಾರಿಕೆ ಬಳಸಲು ಇಟ್ಟಿದ್ದ ಕೆಮಿಕಲ್ ಸ್ಪೋಟಕ್ಕೆ ಕಾರಣವಾಗಿದ್ದು, ಫ್ಯಾಕ್ಟರಿ ಸುತ್ತಮುತ್ತ ದಟ್ಟವಾಗಿ ಬೆಂಕಿ ಆವರಿಸಿಕೊಂಡಿದೆ. ಧಗಧಗನೆ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಮುಂದಾಗಿದ್ದು, ನಿರಂತರವಾಗಿ ಶ್ರಮಿಸುತ್ತಿದೆ.

ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಮೂವರು ಕಾರ್ಮಿಕರು ಸಜೀವ ದಹನವಾಗಿದ್ದು, ಇನ್ನು ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.