MahaKumbh Mela: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ದಿಢೀರ್ ಅಗ್ನಿ ( Fire) ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಟೆಂಟ್ಗಳು, ಕಾರುಗಳು ಸುಟ್ಟು ಭಸ್ಮವಾಗಿವೆ.
ಇದನ್ನೂ ಓದಿ: ಇದೇ ಕಾರಣಕ್ಕೆ ಹಿಂಡನ್ಬರ್ಗ್ ಸಂಸ್ಥೆ ಮುಚ್ಚಿಹೋಯಿತು! ಅಚ್ಚರಿ ಮೂಡಿಸುತ್ತಿದೆ ಈ ವರದಿ | Hindenburg Research
ಟೆಂಟ್ಗಳಲ್ಲಿನ ಸಿಲಿಂಡರ್ಗಳು ಬಾಂಬ್ನಂತೆ ಸ್ಫೋಟಗೊಂಡಿದ್ದೇ ಬೆಂಕಿಗೆ ಕಾರಣ ಎನ್ನಲಾಗಿದೆ. ಸ್ಟೋಟದ ಬೆನ್ನಲ್ಲೇ ವೇಗವಾಗಿ ಬೀಸುತ್ತಿರುವ ಗಾಳಿಯಿಂದ ಬೆಂಕಿ ದಟ್ಟವಾಗಿ ಆವರಿಸಿಕೊಂಡಿದೆ. ವಿವೇಕಾನಂದ ಸೇವಾ ಸಮಿತಿಗೆ ಸೇರಿದ ಟೆಂಟ್ಗಳು ಬೆಂಕಿಗೆ ಆಹುತಿಯಾಗಿವೆ.
ಕುಂಭಮೇಳದ 18ನೇ ಸೆಕ್ಟರ್ನಲ್ಲಿರುವ ಟೆಂಟ್ಗಳಿಗೆ ಬೆಂಕಿ ತಗುಲಿದ್ದು, ಅಗ್ನಿಯ ಜ್ವಾಲೆಗೆ ಟೆಂಟ್ಗಳು ಸೇರಿದಂತೆ ಕಾರುಗಳು ಸಹ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ 20ಕ್ಕೂ ಹೆಚ್ಚು ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ.