ಬೆಂಗಳೂರು: ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂತ್ರಸ್ತೆ, ಆಕೆಯ ಸ್ನೇಹಿತನ ವಿರುದ್ಧವೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅತ್ಯಾಚಾರ ವೇಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಹಾಗೂ ಆತನ ಸ್ನೇಹಿತನ ವಿರುದ್ಧ ಆಟೋ ಚಾಲಕ ನೀಡಿರುವ ದೂರಿನ ಮೇರೆಗೆ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಕೋರಮಂಗಲದ ಪಬ್ ಒಂದರಲ್ಲಿ ಪಾರ್ಟಿ ಮುಗಿಸಿದ ಬಳಿಕ ಯುವತಿ ತಾನೇ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಳು. ಈ ವೇಳೆ ಟಾನಿಕ್ ಬಳಿಯ ಮಂಗಳ ಜಂಕ್ಷನ್ ಬಳಿ ಕಾರು ಅಪಘಾತವಾಗಿದ್ದಯು ಮೂರು ವಾಹನಗಳು ಜಖಂಡಗೊಂಡಿದೆ. ಎರಡು ಆಟೋ ಹಾಗೂ ಒಂದು ಬೈಕ್ಗೆ ಯುವತಿ ಡಿಕ್ಕಿ ಹೊಡೆದಿದ್ದು, ಯುವತಿ ಕಾರನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಆಗ ಯುವತಿ ಜೊತೆಗಿದ್ದ ಆಕೆಯ ಸ್ನೇಹಿತ ಆಟೋ ಹಾಗೂ ಬೈಕ್ ಮಾಲೀಕರೊಂದಿಗೆ ಮಾತನಾಡಿದ ಪರಿಸ್ಥಿತಿಯನ್ನು ನಿಭಾಯಿಸಿ ಯುವತಿಗಾಗಿ ಹುಡುಕಾಡಿದ್ದಾನೆ.
ಮಂಗಳ ಜಂಕ್ಷನ್ನಿಂದ ಎಸ್ಕೇಪ್ ಆದ ಬಳಿಕ ಸಂತ್ರಸ್ತೆ ಡ್ರಾಪ್ ಕೇಳುತ್ತಿದ್ದುದ್ದನ್ನು ಗಮನಿಸಿದ ಸ್ನೇಹಿತ ಆಕೆಯನ್ನು ವಿಚಾರಿಸಿದಾಗ ಪಬ್ನಲ್ಲೇ ಮೊಬೈಲ್ ಬಿಟ್ಟು ಬಂದಿರುವುದಾಗಿ ಹೇಳಿದ್ದಾಳೆ. ನಂತರ ಅಪರಿಚಿತ ವ್ಯಕ್ತಿಯಿಂದ ಡ್ರಾಪ್ ಕೇಳಿ ಅಲ್ಲಿಂದ ಹೊರಟ್ಟಿದ್ದಾಳೆ. ಈ ವೇಳೆ ಯುವತಿಯ ಮೇಲೆ ಅತ್ಯಾಚಾರದ ಯತ್ನ ನಡೆದಿದೆ. ಸದ್ಯ ಆಟೋ ಚಾಲಕ ನೀಡಿದ ದೂರಿನ ಮೇರೆಗೆ ಯುವತಿ ಹಾಗೂ ಆಕೆಯ ಸ್ನೇಹಿತನ ವಿರುದ್ಧ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಅಜಾಗರೂಕತೆ ಮತ್ತು ಅತಿಯಾದ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಚೇತರಿಸಿಕೊಳ್ಳುತ್ತಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.