ನ್ಯೂಸ್

ರಾಣೆಬೆನ್ನೂರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ವಿರುದ್ಧ ಎಫ್ಐಆರ್ ದಾಖಲು

ಹಾವೇರಿ: ರಾಣೆಬೆನ್ನೂರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನೀತಿ ಸಂಹಿತಿ ಉಲ್ಲಂಘನೆ ಆರೋಪದಡಿ ರಾಣೆಬೆನ್ನೂರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ರಾಣೆಬೆನ್ನೂರ ಗಂಗಾಜಲ ತಾಂಡಾ ಬಳಿಯ ಕೆವಿ ಪಾಲಿಟೆಕ್ನಿಕ್ ಕಾಲೇಜ್ ನಲ್ಲಿ ಮತಯಾಚನೆ ಮಾಡಿದ ಆರೋಪ ಕೇಳಿ ಬಂದಿದೆ.

ಮತಯಾಚನೆ ಮಾಡಿರುವ ಬಗ್ಗೆ ಫೇಸ್ಬುಕ್​​ ಖಾತೆಯಲ್ಲಿ ಹಂಚಿಕೊಂಡ ಅರುಣಕುಮಾರ ಪೂಜಾರ ಈ ಕುರಿತು ರುದ್ರಪ್ಪ ಭಜಂತ್ರಿ ಎಂಬುವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.