ಕಾಂತಾರ ಸಿನಿಮಾದಲ್ಲಿ ರಿಷಬ್​​ ಪತ್ನಿ ಉಟ್ಟಿದ್ದ 32ವರ್ಷ ಹಳೆಯ ಸೀರೆ!

pragathishetty
Published on

ಬೆಂಗಳೂರು: ಸ್ಯಾಂಡಲ್​ವುಡ್​​ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದಲ್ಲಿನ ರಿಷಬ್ ಪತ್ನಿ ಕೂಡಾ ಕಾಣಿಸಿಕೊಂಡಿರುವುದು ಗೊತ್ತಿರುವ ವಿಚಾರ. ಈ ಸಿನಿಮಾದಲ್ಲಿ ಉಟ್ಟಿದ್ದ ಸೀರೆಯೊಂದರ ವಿಶೇಷತೆಯ ಬಗ್ಗೆ ರಿಷಬ್ ಪತ್ನಿ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಕಾಂತಾರ ಸಿನಿಮಾದ ಆರಂಭದಲ್ಲಿ ಕಾಣಿಸಿಕೊಳ್ಳುವ ರಾಜನ ಪತ್ನಿ ಅಂದರೆ ರಾಣಿಯ ಪಾತ್ರದಲ್ಲಿ ಪ್ರಗತಿ ಕಾಣಿಸಿಕೊಂಡಿದ್ದರು.ಇದೀಗಾ ರಾಣಿಯ ಪಾತ್ರದಲ್ಲಿ ತಾನು ಉಟ್ಟಿದ್ದ ಸೀರೆಯ ಬಗ್ಗೆ ಸೋಶಿಯಲ್​ ಮೀಡಿಯಾಗಳಲ್ಲಿ ಪೋಸ್ಟ್​​​ ಒಂದನ್ನು ಹಂಚಿಕೊಂಡಿದ್ದಾರೆ.

ಸಿನಿಮಾಗಾಗಿ ಯಾವುದೋ ಮಳಿಗೆಯಿಂದ ಖರೀದಿಸಿದ ಸೀರೆಯಲ್ಲ. ಬದಲಾಗಿ ಈ ಸೀರೆಯ 32ವರ್ಷ ಹಳೆಯದ್ದು. 'ನನ್ನ ಅಮ್ಮನ ಮದುವೆಯ ಸೀರೆಯನ್ನು ಮುವ್ವತ್ತೆರೆಡು ವರ್ಷದ ನಂತರ ಕಾಂತಾರ ಸಿನಿಮಾದಲ್ಲಿ ಉಟ್ಟಿದ್ದು ತುಂಬಾ ಸಂತಸ ತಂದಿತ್ತು' ರಿಷಬ್​ ಪತ್ನಿ ಪ್ರಗತಿ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net