ನ್ಯೂಸ್

ಕೊನೆಗೂ ಒಂದಷ್ಟು ಸೇನೆ, ವಾಹನಗಳನ್ನು ಹಿಂದಕ್ಕೆ ಕರೆಯಿಸಿಕೊಂಡ ಚೀನಾ

vinaymk1969

ನವದೆಹಲಿ: ಬಾಯಲ್ಲಿ ಶಾಂತಿ ಮಂತ್ರ, ಬಗಲಲ್ಲಿ ದಂಡ ಎಂಬಂಧ ಇಬ್ಬಂದಿ ಧೋರಣೆಯನ್ನು ಸದಾ ಅನುಸರಿಸುವ ಚೀನಾ ಗಲ್ವಾನ್​ ಕಣಿವೆಯಲ್ಲಿ ನಿಯೋಜನೆಗೊಂಡಿದ್ದ ಒಂದಷ್ಟು ಸೇನೆ ಮತ್ತು ಸೇನಾವಾಹನಗಳನ್ನು ಕೊನೆಗೂ ಹಿಂದಕ್ಕೆ ಕರೆಯಿಸಿಕೊಂಡಿದೆ.

ಜೂ.22ರಂದು ನಡೆದಿದ್ದ ಮಿಲಿಟರಿ ಮಟ್ಟದ ಮಾತುಕತೆ ವೇಳೆ ಗಲ್ವಾನ್​ ಕಣಿವೆಯಲ್ಲಿ ನಿಯೋಜನೆಗೊಳಿಸಿರುವ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಬಗ್ಗೆ ಭಾರತ ಮತ್ತು ಚೀನಾ ಸಹಮತ ವ್ಯಕ್ತಪಡಿಸಿದ್ದವು. ಆದರೆ, ತನ್ನ ಮಾತಿನಿಂದ ಹಿಂದೆ ಸರಿದಿದ್ದ ಚೀನಾ ಗುರುವಾರದ ವೇಳೆಗೆ ಜೂ.15ರಂದು ರಕ್ತಸಿಕ್ತ ಘರ್ಷಣೆಗೆ ಕಾರಣವಾಗಿದ್ದ ಗಸ್ತು ಪಾಯಿಂಟ್​ 14ರಲ್ಲಿ ಮತ್ತೊಮ್ಮೆ ವೀಕ್ಷಣಾ ಗೋಪುರ ಸ್ಥಾಪಿಸಿ, ಆ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಮುಂದಾಗಿತ್ತು.

ಆದರೆ, ಮಧ್ಯಾಹ್ನದ ವೇಳೆಗೆ ಈ ಸ್ಥಳದಲ್ಲಿದ್ದ ತನ್ನ ಯೋಧರು ಮತ್ತು ಸೇನಾವಾಹನಗಳು ಮತ್ತಿತರ ಯುದ್ಧೋಪಕರಣವನ್ನು ವಾಪಸು ಕರೆಯಿಸಿಕೊಂಡಿತು ಎನ್ನಲಾಗಿದೆ.

ಜೂ.15ರ ರಕ್ತಸಿಕ್ತ ಘರ್ಷಣೆಯ ಸಂದರ್ಭದಲ್ಲಿ ಭಾರತದ ಯೋಧರು ಗಸ್ತು ಪಾಯಿಂಟ್​ 14ರಲ್ಲಿದ್ದ ಚೀನಾದ ವೀಕ್ಷಣಾ ಗೋಪುರ ಮತ್ತು ಟೆಂಟ್​ ಅನ್ನು ಕಿತ್ತುಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಗುರುವಾರ ಬೆಳಗಿನ ಉಪಗ್ರಹ ಚಿತ್ರದಲ್ಲಿ ಅದೇ ಸ್ಥಳದಲ್ಲಿ ಮತ್ತೆ ವೀಕ್ಷಣಾ ಗೋಪುರ ಸ್ಥಾಪಿಸಿದ್ದು, ಯೋಧರ ಶಿಬಿರಗಳನ್ನು ಹಾಕಿದ್ದ ದೃಶ್ಯ ಕಂಡುಬಂದಿತ್ತು.