More

    ಗಮನ ಬೇರೆಡೆ ಸೆಳೆಯಲು ಪಾಕ್​ ಮೇಲೆ ದಾಳಿಗೆ ಭಾರತದ ಹುನ್ನಾರ

    ಇಸ್ಲಾಮಾಬಾದ್​: ಚೀನಾದೊಂದಿಗೆ ಲಡಾಖ್​ನ ಪೂರ್ವ ಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟು ಹಾಗೂ ಗಡಿ ವಿವಾದವನ್ನು ಪರಿಹರಿಸಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿರುವ ಭಾರತ ತನ್ನ ಮೇಲೆ ದಾಳಿ ಮಾಡಲು ಹುನ್ನಾರ ನಡೆಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್​ ಖುರೇಷಿ ಹೇಳಿದ್ದಾರೆ.

    ಚೀನಾದೊಂದಿಗಿನ ಗಡಿವಿವಾದದಿಂದಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ದೇಶದ ಜನತೆ ಹಾಗೂ ಪ್ರತಿಪಕ್ಷಗಳ ಗಮನವನ್ನು ಈ ವಿಷಯದಿಂದ ಬೇರೆಡೆ ಸೆಳೆಯಲು ಪಾಕ್​ ಮೇಲೆ ದಾಳಿ ನಡೆಸಲು ಭಾರತ ಸಂಚು ರೂಪಿಸುತ್ತಿದೆ ಎಂದು ಹೇಳಿದ್ದಾರೆ.

    ಭಾರತದಲ್ಲಿನ ಪಾಕ್​ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಅರ್ಧಕ್ಕೆ ಅರ್ಧದಷ್ಟು ಕಡಿಮೆ ಮಾಡುವಂತೆ ಭಾರತ ಸೂಚನೆ ನೀಡಿದ ಬೆನ್ನಲ್ಲೇ ಷಾ ಮೆಹಮೂದ್​ ಖುರೇಷಿ ಈ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ಭಾರತೀಯ ಕಂಪನಿಗಳ ರೆಂಡೆಸಿವಿರ್​ ಚುಚ್ಚುಮದ್ದು ದರ 5 ಸಾವಿರ ರೂ.ನಿಂದ 5,400 ರೂ.

    ಚೀನಾ ಗಡಿ ವಿವಾದದ ಕುರಿತು ಭಾರತದ ಪ್ರತಿಪಕ್ಷಗಳು ಎತ್ತುತ್ತಿರುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗದೆ ಭಾರತ ಸರ್ಕಾರ ತಡಬಡಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಗಮನವನ್ನು ಬೇರೆಡೆ ಸೆಳೆಯಲು ಪಾಕ್​ ಮೇಲೆ ದಾಳಿ ಮಾಡಲು ಅದು ಸಂಚು ರೂಪಿಸುತ್ತಿದೆ. ಅದೇನಾದರೂ ಅಂಥ ದುಸ್ಸಾಹಸಕ್ಕೆ ಕೈ ಹಾಕಿದ್ದಲ್ಲಿ ಪಾಕಿಸ್ತಾನ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ಎಚ್ಚರಿಸಿದ್ದಾರೆ.

    ಆದರೆ ಭಾರತ ಯಾವ ರೀತಿಯ ದಾಳಿ ನಡೆಸಲು ಸಜ್ಜಾಗುತ್ತಿದೆ ಎಂಬ ಬಗ್ಗೆ ವಿವರಣೆಯನ್ನಾಗಲಿ ಅಥವಾ ಸಾಕ್ಷ್ಯಾಧಾರಗಳನ್ನಾಗಲಿ ಒದಗಿಸಲು ಅವರು ವಿಫಲರಾಗಿದ್ದಾರೆ.

    ಕೋವಿಡ್​ನಿಂದ ಸತ್ತ ಪಾನಿಪುರಿ ಮಾರಾಟಗಾರನ ಕುಟುಂಬಕ್ಕೆ ಸಾರ್ವಜನಿಕರ ನೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts