More

    ಕೋವಿಡ್​ನಿಂದ ಸತ್ತ ಪಾನಿಪುರಿ ಮಾರಾಟಗಾರನ ಕುಟುಂಬಕ್ಕೆ ಸಾರ್ವಜನಿಕರ ನೆರವು

    ಮುಂಬೈ: ತಮ್ಮ ಪ್ರೀತಿಯ ಪಾನಿಪುರಿ ಮಾರಾಟಗಾರ ಕೋವಿಡ್​ 19 ಸೋಂಕಿನಿಂದ ಮೃತಪಟ್ಟಿದ್ದಕ್ಕಾಗಿ ಆತನ ಗ್ರಾಹಕರು ಮರುಗುತ್ತಿದ್ದಾರೆ. ಕಡುಬಡವನಾಗಿದ್ದ ಆತನ ಕುಟುಂಬದವರ ನೆರವಿಗಾಗಿ ಮುಂದಾಗಿರುವ ದಕ್ಷಿಣ ಮುಂಬೈನ ಜನತೆ 5 ಲಕ್ಷ ರೂ. ದೇಣಿಗೆ ಸಂಗ್ರಹಿಸಿಕೊಡಲು ನಿರ್ಧರಿಸಿದ್ದಾರೆ.

    ಮುಂಬೈನ ವಾಲ್ಕೇಶ್ವರದ ಮಾತಾ ಪಾರ್ವತಿ ನಗರದಲ್ಲಿ ನೆಲೆಸಿದ್ದ ಭಗವತಿ ಯಾದವ್​ ಎಂಬ ಪಾನಿಪುರಿ ಮಾರಾಟಗಾರ 46 ವರ್ಷಗಳಿಂದ ಪ್ರತಿದಿನ ನೇಪಿಯನ್​ ಸೀ ರೋಡ್​ನ ರಂಗ್ಟಾ ಲೇನ್​ನಲ್ಲಿ ಅಂಗಡಿ ಹಾಕುತ್ತಿದ್ದ. ತುಂಬಾ ರುಚಿಕಟ್ಟಾಗಿ ಪಾನಿಪುರಿ ಮಾಡಿಕೊಡುತ್ತಿದ್ದ. ಈತ ಬಿಸ್ಲೇರಿ ಮಿನರಲ್​ ವಾಟರ್​ ಬಳಸಿ ಪಾನಿ ಸಿದ್ಧಪಡಿಸುತ್ತಿದ್ದ. ಹಾಗಾಗಿ ಈತನಿಗೆ ಬಿಸ್ಲೇರಿ ಪಾನಿಪುರಿವಾಲಾ ಎಂಬ ಹೆಸರೂ ಇತ್ತು. ಹಾಗಾಗಿ ದಕ್ಷಿಣ ಮುಂಬೈನ ಜನ ಪ್ರತಿದಿನವೂ ಈತನಲ್ಲಿ ಬಂದು ಪಾನಿಪುರಿ ಸವಿಯುತ್ತಿದ್ದರು.

    ಇದನ್ನೂ ಓದಿ: ಭಾರತೀಯ ಕಂಪನಿಗಳ ರೆಂಡೆಸಿವಿರ್​ ಚುಚ್ಚುಮದ್ದು ದರ 5 ಸಾವಿರ ರೂ.ನಿಂದ 5,400 ರೂ.

    ಆದರೆ, ಇತ್ತೀಚೆಗೆ ಕೋವಿಡ್​-19 ಸೋಂಕಿಗೆ ತುತ್ತಾದ ಈತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ. ಈತನ ಬಡ ಹಿನ್ನೆಲೆ ತಿಳಿದಿದ್ದ ದಕ್ಷಿಣ ಮುಂಬೈನ ಜನ ಸಾರ್ವಜನಿಕವಾಗಿ ದೇಣಿಗೆ ಸಂಗ್ರಹಿಸಿ ಈತನ ಕುಟುಂಬದವರಿಗೆ ನೆರವಾಗಲು ಮುಂದಾಗಿದ್ದಾರೆ. ಇದುವರೆಗೂ 2.5 ಲಕ್ಷ ರೂ. ಸಂಗ್ರಹವಾಗಿರುವುದಾಗಿ ಕ್ರೌಡ್​ ಫಂಡಿಂಗ್​ ಆರಂಭಿಸಿರುವ ಗಿರೀಶ್​ ಅಗರ್​ವಾಲ್​ ತಿಳಿಸಿದ್ದಾರೆ.

    ಪಾನಿಪುರವಾಲಾನ ಪುತ್ರಿ ಗಣಿತ ಶಿಕ್ಷಕಿಯಾಗಿದ್ದರೆ, ಆತನ ಪತ್ನಿ ಗೃಹಿಣಿಯಾಗಿದ್ದಾಳೆ. ಭಗವತಿ ಯಾದವ್​ ಪಾನಿಪುರಿ ಮಾರಿ ತರುತ್ತಿದ್ದ ಹಣದಲ್ಲೇ ಇವರ ಕುಟುಂಬ ಸಾಗಬೇಕಿತ್ತು. ಇದೀಗ ಆತ ಇಲ್ಲವಾಗಿರುವ ಕಾರಣ ಈ ಕುಟುಂಬಕ್ಕೆ ಆರ್ಥಿಕ ಸಹಾಯದ ಅತ್ಯಗತ್ಯವಿದೆ. ಹಾಗಾಗಿ ತಾವು ಕ್ರೌಡ್​ ಫಂಡಿಂಗ್​ ಆರಂಭಿಸಿದ್ದಾಗಿ ತಿಳಿಸಿದ್ದಾರೆ.

    ಸರ್ವಪಕ್ಷ ಸಭೆ ಕರೆದ ಸಿಎಂ, ಲಾಕ್​ಡೌನ್​ ಯಾವಾಗ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts