More

    ದೊಡ್ಡಮ್ಮತಾಯಿ ದೇಗುಲ ವಾರ್ಷಿಕೋತ್ಸವ

    ಬೈಲಕುಪ್ಪೆ: ಬೈಲಕುಪ್ಪೆ ಗ್ರಾಮದೇವತೆ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನದಲ್ಲಿ 14ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿತು.


    ಶ್ರೀ ಗಣಪತಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಪದಾಧಿಕಾರಿಗಳು ಮುಂಜಾನೆಯಿಂದಲೇ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ, ತಳಿರು-ತೋರಣ ಕಟ್ಟಿ ಸಿಂಗರಿಸಿದರು. ಬಳಿಕ ದೊಡ್ಡಮ್ಮತಾಯಿಗೆ ನೈವೇದ್ಯ, ಮಹಾಮಂಗಳಾರತಿ ನೆರವೇರಿಸಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.

    ಟ್ರಸ್ಟ್ ಅಧ್ಯಕ್ಷ ಡಿ.ಸುಬ್ರಹ್ಮಣ್ಯ, ಉಪಾಧ್ಯಕ್ಷ ಎಂ.ಎನ್.ಸುರೇಶ್, ಪ್ರಧಾನ ಕಾರ್ಯದರ್ಶಿ ಎನ್.ಸ್ವಾಮಿ, ಗೌರವಾಧ್ಯಕ್ಷ ಕೆ.ವಿಜಯಕುಮಾರ್, ಖಜಾಂಚಿ ಟಿ.ಕೆ.ಲೋಕೇಶ್, ಸದಸ್ಯರಾದ ರಾಜೇಶ್, ಕೆ.ರಮೇಶ್, ಜಗದೀಶ್, ಕಾಂತರಾಜ ಶೆಟ್ಟಿ, ರಾಮೇಗೌಡ, ಮರಿನಾಯ್ಕ, ಜಯರಾಮ್, ಹೆಮೇಶ್, ಪೆಮ್ಮಯ್ಯ, ಪಿಡಿಒ ಬೋರೆಗೌಡ, ಗ್ರಾಮಲೆಕ್ಕಾಧಿಕಾರಿ ನವೀನ್‌ರಾವ್, ಜವರೇಗೌಡ ಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts