More

    ಭಾರತೀಯ ಕಂಪನಿಗಳ ರೆಂಡೆಸಿವಿರ್​ ಚುಚ್ಚುಮದ್ದು ದರ 5 ಸಾವಿರ ರೂ.ನಿಂದ 5,400 ರೂ.

    ಬೆಂಗಳೂರು: ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ರೆಂಡೆಸಿವಿರ್​ನ ಉತ್ಪಾದನೆಗೆ ಅಮೆರಿಕದ ಗಿಲ್​ಲೀಡ್​ ಕಂಪನಿಯ ಪರವಾನಗಿ ಪಡೆದಿರುವ ಭಾರತದ ಹೈದರಾಬಾದ್​ ಮೂಲದ ಹೆಟೆರೊ ಲ್ಯಾಬ್ಸ್​ ಲಿಮಿಟೆಡ್​, ರೆಂಡೆಸಿವಿರ್​ನ ಜೆನರಿಕ್​ ಮಾದರಿಯ ಔಷಧದ ಬೆಲೆಯನ್ನು 100 ಮಿಲಿಗ್ರಾಂನ ಒಂದು ವಯಲ್​ಗೆ 5,400 ರೂ. ನಿಗದಿಪಡಿಸಿದೆ.

    ಹೆಟೆರೋ ಕಂಪನಿಯು ಈಗಾಗಲೆ ರೆಂಡೆಸಿವಿರ್​ನ ಜೆನರಿಕ್​ ಮಾದರಿಯ ಚುಚ್ಚುಮದ್ದುಗಳನ್ನು ಉತ್ಪಾದಿಸಿದ್ದು, 20 ಸಾವಿರ ವಯಲ್​ಗಳನ್ನು ಆಸ್ಪತ್ರೆಗೆ ಸರಬರಾಜು ಮಾಡುತ್ತಿರುವುದಾಗಿ ಹೇಳಿದೆ.

    ಇದನ್ನೂ ಓದಿ: ಕರೊನಾ ರೋಗಲಕ್ಷಣ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಾಯುತ್ತಿರುವ ಜನ

    ಸಿಪ್ಲಾ ಕಂಪನಿ ಕೂಡ ಗಿಲ್​ಲೀಡ್​ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ತಾನು ಸಿದ್ಧಪಡಿಸುವ ರೆಂಡೆಸಿವಿರ್​ ಕೋವಿಡ್​ ನಿರೋಧಕ ಚುಚ್ಚುಮದ್ದಿನ ಬೆಲೆಯಲ್ಲಿ 100 ಮಿಲಿಗ್ರಾಂನ ಒಂದು ವಯಲ್​ಗೆ 5 ಸಾವಿರ ರೂ. ನಿಗದಿಪಡಿಸುವುದಾಗಿ ಹೇಳಿದೆ.

    ತುರ್ತು ಅವಶ್ಯಕತೆ ಇರುವ ಕರೊನಾ ಸೋಂಕಿತರಿಗೆ ಮಾತ್ರವೇ ಕೊಡಬೇಕು ಎಂಬ ಷರತ್ತಿನ ಮೇರೆಗೆ ಭಾರತದಲ್ಲಿ ರೆಂಡೆಸಿವಿರ್​ನ ಜೆನರಿಕ್​ ಮಾದರಿಯ ಚುಚ್ಚುಮದ್ದನ್ನು ಉತ್ಪಾದಿಸಿ, ಸರಬರಾಜು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ಕಿರುತೆರೆ ನಟಿ ಮನೆಗೆ ನುಗ್ಗಿ ಯುವಕರ ಗುಂಪಿನಿಂದ ಹಲ್ಲೆ: ಅಶ್ಲೀಲ ಪದಗಳಿಂದ ನಿಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts