ನವದೆಹಲಿ : 66ನೇ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭವು ನಿನ್ನೆ ಮುಂಬೈನಲ್ಲಿ ನಡೆಯಿತು. ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿಯು 'ಅಂಗ್ರೇಜಿ ಮೀಡಿಯಂ' ಚಿತ್ರದ ನಟನೆಗಾಗಿ ಮರಣೋತ್ತರವಾಗಿ ಇರ್ಫಾನ್ ಖಾನ್ ಅವರಿಗೆ ಲಭಿಸಿದೆ. ಅತ್ಯುತ್ತಮ ನಟಿ ಪ್ರಶಸ್ತಿಯು 'ಥಪ್ಪಡ್' ಚಿತ್ರದ ನಟನೆಗಾಗಿ ತಾಪ್ಸೀ ಪನ್ನು ಅವರಿಗೆ ಲಭಿಸಿದೆ.
'ಥಪ್ಪಡ್' ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಯೊಂದಿಗೆ ಅತ್ಯುತ್ತಮ ಕಥೆ, ಸಂಪಾದನೆ, ಹಿನ್ನೆಲೆ ಸಂಗೀತ, ಧ್ವನಿ ವಿನ್ಯಾಸಗಳಿಗೂ ಪ್ರಶಸ್ತಿಗಳನ್ನು ಪಡೆದುಕೊಂಡಿತು. ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ 'ಗುಲಾಬೊ ಸಿತಾಬೊ' ಚಿತ್ರದ ನಟನೆಗಾಗಿ ಬೆಸ್ಟ್ ಆ್ಯಕ್ಟರ್ (ಕ್ರಿಟಿಕ್ಸ್) ಪ್ರಶಸ್ತಿ ಲಭಿಸಿತು. ಸಾಯಿಫ್ ಅಲಿ ಖಾನ್ಗೆ 'ತಾನ್ಹಾಜಿ: ದಿ ಅನ್ಸಂಗ್ ವಾರಿಯರ್' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದರೆ, ಕಾಜಲ್ ನಿರ್ಮಿಸಿದ 'ದೇವಿ' ಚಿತ್ರಕ್ಕೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಲಭಿಸಿತು.
ಕಳೆದ ವರ್ಷ ಏಪ್ರಿಲ್ನಲ್ಲಿ, ದೀರ್ಘಕಾಲ ಕ್ಯಾನ್ಸರ್ನಿಂದ ನರಳಿ ತಮ್ಮ 53 ನೇ ವಯಸ್ಸಿನಲ್ಲಿ ಸಾವಪ್ಪಿದ ಪ್ರತಿಭಾನ್ವಿತ ನಟ ಇರ್ಫಾನ್ರಿಗೆ ಲೈಫ್ಟೈಮ್ ಅಚೀವ್ಮೆಂಟ್ ಅವಾರ್ಡ್ ಕೂಡ ನೀಡಲಾಯಿತು. ಈ ಟ್ರೋಫಿಗಳನ್ನು ಇರ್ಫಾನ್ ಅವರ ಮಗ ಬಾಬಿಲ್ ಸ್ವೀಕರಿಸಿದರು. (ಏಜೆನ್ಸೀಸ್)
-: 2021ರ ಫಿಲ್ಮ್ಫೇರ್ ಪ್ರಶಸ್ತಿಗಳ ವಿಜೇತರ ಪಟ್ಟಿ ಹೀಗಿದೆ :-
ಅತ್ಯುತ್ತಮ ಚಿತ್ರ - ಥಪ್ಪಡ್
ಅತ್ಯುತ್ತಮ ನಿರ್ದೇಶಕ - ಓಂ ರೌತ್ (ತಾನ್ಹಾಜಿ: ದಿ ಅನ್ಸಂಗ್ ವಾರಿಯರ್ ಚಿತ್ರಕ್ಕಾಗಿ)
ಅತ್ಯುತ್ತಮ ಚಲನಚಿತ್ರ (ವಿಮರ್ಶಕರು) - ಪ್ರತೀಕ್ ವತ್ಸ್ (ಈಬ್ ಅಲ್ಲೆ ಓಹ್! ಚಿತ್ರ)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ ಇರ್ಫಾನ್ (ಆಂಗ್ರೇಜಿ ಮೀಡಿಯಂ ಚಿತ್ರಕ್ಕಾಗಿ)
ಅತ್ಯುತ್ತಮ ನಟ (ವಿಮರ್ಶಕರು) - ಅಮಿತಾಬ್ ಬಚ್ಚನ್ (ಗುಲಾಬೊ ಸೀತಾಬೊ ಚಿತ್ರಕ್ಕಾಗಿ)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ - ತಾಪ್ಸೀ ಪನ್ನು (ಥಪ್ಪಡ್ ಚಿತ್ರಕ್ಕಾಗಿ)
ಅತ್ಯುತ್ತಮ ನಟಿ (ವಿಮರ್ಶಕರು) - ತಿಲೋತ್ತಮಾ ಶೋಮ್ (ಸರ್ ಚಿತ್ರಕ್ಕಾಗಿ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ - ಸೈಫ್ ಅಲಿ ಖಾನ್ (ತಾನ್ಹಾಜಿ: ದ ಅನ್ಸಂಗ್ ವಾರಿಯರ್ ಚಿತ್ರಕ್ಕಾಗಿ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ - ಫಾರೋಖ್ ಜಾಫರ್ (ಗುಲಾಬೊ ಸೀತಾಬೊ ಚಿತ್ರಕ್ಕಾಗಿ)
ಅತ್ಯುತ್ತಮ ಕಥೆ - ಅನುಭವ್ ಸುಶೀಲಾ ಸಿನ್ಹಾ ಮತ್ತು ಮೃನ್ಮಯಿ ಲಗೂ ವೈಕುಲ್ (ಥಪ್ಪಡ್)
ಅತ್ಯುತ್ತಮ ಚಿತ್ರಕಥೆ - ರೋಹೆನಾ ಗೆರಾ (ಸರ್)
ಅತ್ಯುತ್ತಮ ಸಂಭಾಷಣೆ - ಜುಹಿ ಚತುರ್ವೇದಿ (ಗುಲಾಬೊ ಸೀತಾಬೊ)
ಅತ್ಯುತ್ತಮ ಚೊಚ್ಚಲ ನಿರ್ದೇಶಕ - ರಾಜೇಶ್ ಕೃಷ್ಣನ್ (ಲೂಟ್‌ಕೇಸ್ ಚಿತ್ರಕ್ಕಾಗಿ)
ಅತ್ಯುತ್ತಮ ಚೊಚ್ಚಲ ನಟಿ ಅಲಯಾ ಎಫ್. (ಜವಾನಿ ಜಾನೆಮನ್ ಚಿತ್ರಕ್ಕಾಗಿ)
ಅತ್ಯುತ್ತಮ ಸಂಗೀತ ಆಲ್ಬಮ್ - ಪ್ರೀತಮ್- (ಲುಡೋ)
ಅತ್ಯುತ್ತಮ ಸಾಹಿತ್ಯ - ಗುಲ್ಜಾರ್ (ಛಪ್ಪಕ್ ಚಿತ್ರದ ಛಪ್ಪಕ್ ಗೀತೆ)
ಅತ್ಯುತ್ತಮ ಹಿನ್ನೆಲೆ ಗಾಯಕ - ರಾಘವ್ ಚೈತನ್ಯ - ಏಕ್ ತುಕ್ಡಾ ಧೂಪ್ (ಥಪ್ಪಡ್)
ಅತ್ಯುತ್ತಮ ಹಿನ್ನೆಲೆ ಗಾಯಕಿ - ಆಸೀಸ್ ಕೌರ್- ಮಲಾಂಗ್ (ಮಲಾಂಗ್)
ಜೀವಮಾನ ಸಾಧನೆ ಪ್ರಶಸ್ತಿ - ಇರ್ಫಾನ್
ಅತ್ಯುತ್ತಮ ಆಕ್ಷನ್ - ರಂಜಾನ್ ಬುಲಟ್, ಆರ್.ಪಿ.ಯಾದವ್ (ತಾನ್ಹಾಜಿ : ದಿ ಅನ್ಸಂಗ್ ವಾರಿಯರ್)
ಅತ್ಯುತ್ತಮ ಹಿನ್ನೆಲೆ ಸಂಗೀತ - ಮಂಗೇಶ್ ಉರ್ಮಿಳಾ ಧಕ್ಡೆ (ಥಪ್ಪಡ್)
ಅತ್ಯುತ್ತಮ ಛಾಯಾಗ್ರಹಣ - ಅವಿಕ್ ಮುಖೋಪಾಧ್ಯಾಯ (ಗುಲಾಬೊ ಸೀತಾಬೋ)
ಅತ್ಯುತ್ತಮ ನೃತ್ಯ ಸಂಯೋಜನೆ - ಫರಾಹ್ ಖಾನ್- ದಿಲ್ ಬೆಚಾರಾ ಹಾಡು (ದಿಲ್ ಬೆಚಾರಾ)
ಅತ್ಯುತ್ತಮ ವೇಷಭೂಷಣ ವಿನ್ಯಾಸ - ವೀರಾ ಕಪೂರ್ ಇ. (ಗುಲಾಬೊ ಸೀತಾಬೊ)
ಅತ್ಯುತ್ತಮ ಸಂಪಾದನೆ - ಯಶಾ ಪುಷ್ಪಾ ರಾಮ್‌ಚಂದಾನಿ (ಥಪ್ಪಡ್)
ಅತ್ಯುತ್ತಮ ನಿರ್ಮಾಣ ವಿನ್ಯಾಸ - ಮಾನಸಿ ಧ್ರುವ್ ಮೆಹ್ತಾ (ಗುಲಾಬೊ ಸೀತಾಬೊ)
ಅತ್ಯುತ್ತಮ ಧ್ವನಿ ವಿನ್ಯಾಸ - ಕಾಮೋದ್ ಖರಡೆ (ಥಪ್ಪಡ್)
ಅತ್ಯುತ್ತಮ ವಿಎಫ್‌ಎಕ್ಸ್ - ಪ್ರಸಾದ್ ಸುತರ್ (ಎನ್ವೈ ವಿಎಫ್‌ಎಕ್ಸ್ ವಾಲಾ) (ತಾನ್ಹಾಜಿ: ದ ಅನ್ಸಂಗ್ ವಾರಿಯರ್ ಚಿತ್ರಕ್ಕಾಗಿ)
ಕಿರುಚಿತ್ರ ಪ್ರಶಸ್ತಿಗಳು
ಅತ್ಯುತ್ತಮ ಚಿತ್ರ (ಫಿಕ್ಷನ್) - ಶಿವರಾಜ್ ವೈಚಲ್ (ಅರ್ಜುನ್)
ಅತ್ಯುತ್ತಮ ಚಿತ್ರ (ನಾನ್-ಫಿಕ್ಷನ್) - ನಿತೇಶ್ ರಮೇಶ್ ಪರುಲೇಕರ್ (ಬ್ಯಾಕ್ಯಾರ್ಡ್ ವೈಲ್ಡ್ಲೈಫ್ ಸಾಂಕ್ಚುವರಿ)
ಅತ್ಯುತ್ತಮ ನಟಿ - ಪೂರ್ತಿ ಸವರ್ದೇಕರ್ (ದ ಫಸ್ಟ್ ವೆಡ್ಡಿಂಗ್)
ಅತ್ಯುತ್ತಮ ನಟ - ಅರ್ಣವ್ ಅಬ್ದಗಿರೆ (ಅರ್ಜುನ್)
ಅತ್ಯುತ್ತಮ ಚಿತ್ರ (ಜನಪ್ರಿಯ ಆಯ್ಕೆ) ದೇವಿ