ಆಂಧ್ರಪ್ರದೇಶ: ಇಂದು (ಜೂ.12) ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದು, ಸಮಾರಂಭಕ್ಕೆ ತೆಲುಗು ದೇಶಂ ಪಕ್ಷ-ಭಾರತೀಯ ಜನತಾ ಪಕ್ಷ-ಜನಸೇನಾ ನಾಯಕ ಹಾಗೂ ಚಿತ್ರನಟ ಪವನ್ ಕಲ್ಯಾಣ್ ಕೂಡ ಹಾಜರಾಗಲಿದ್ದಾರೆ. ದಕ್ಷಿಣ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಚಂದ್ರಬಾಬು ಜತೆಗೆ ಪವನ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರಾ ಎಂಬ ಪ್ರಶ್ನೆ ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮೋದಿ 3.0ನಲ್ಲಿ ವಿಐಪಿ ಭದ್ರತೆಗೆ ಹೊಸ ರೂಪ: ಎನ್ಎಸ್ಜಿ, ಐಟಿಬಿಪಿ ಹಿಂದೆಗೆತ ಅರೆಸೇನಾಪಡೆ ನಿಯೋಜನೆಗೆ ಚಿಂತನೆ
ವಿಜಯವಾಡದ ಹೊರವಲಯದಲ್ಲಿರುವ ಗನ್ನವರಂ ವಿಮಾನ ನಿಲ್ದಾಣದ ಬಳಿ ಇರುವ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಇಂದು ಬೆಳಗ್ಗೆ 11.27ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ನಾಯ್ಡು ಅವರೊಂದಿಗೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಪಕ್ಷದ ಹಿರಿಯ ನಾಯಕ ಎನ್. ಮನೋಹರ್, ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಮತ್ತು ಟಿಡಿಪಿ ಆಂಧ್ರಪ್ರದೇಶ ನಾಯಕ ಅಚ್ಚನ್ನಾಯ್ಡು ಸೇರಿದಂತೆ ಇತರ ಪ್ರಮುಖ ನಾಯಕರು ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಆಗಮಿಸಲಿದ್ದು, ತೆಲುಗು ಚಿತ್ರನಟರಾದ ಅಲ್ಲು ಅರ್ಜುನ್, ಜೂ. ಎನ್ಟಿಆರ್ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಸೋಮವಾರ (ಜೂ.11) ಬೆಳಗ್ಗೆ ನವದೆಹಲಿಯಿಂದ ಮರಳಿದ ನಾಯ್ಡು ಮತ್ತು ಪವನ್ ಕಲ್ಯಾಣ್ ಸೇರಿದಂತೆ ಎನ್‌ಡಿಎ ನಾಯಕರು ರಾಜ್ಯ ಸಚಿವ ಸಂಪುಟ ರಚನೆ ಕುರಿತು ಭಾರೀ ಚರ್ಚೆ ನಡೆಸಿದ್ದಾರೆ,(ಏಜೆನ್ಸೀಸ್).