ಫೈಟರ್ ರವಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿ ವಿವಾದಕ್ಕೀಡಾಗಿದ್ದ ಫೋಟೋ. 
ನ್ಯೂಸ್

ಬಿಜೆಪಿಯ ಮತ್ತೊಂದು ವಿಕೆಟ್ ಪತನ; ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಫೈಟರ್ ರವಿ

ಮಂಡ್ಯ: ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಒಬ್ಬೊಬ್ಬರಾಗಿ ಪಕ್ಷ ಬಿಡುತ್ತಿದ್ದು, ಇದೀಗ ಬಿಜೆಪಿಯ ಇನ್ನೊಬ್ಬರು ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಟಿಕೆಟ್​ವಂಚಿತರಾಗಿದ್ದಕ್ಕೆ ಬೇಸರಗೊಂಡಿರುವ ಬಿ.ಎಂ.ಮಲ್ಲಿಕಾರ್ಜುನ ಅಲಿಯಾಸ್​ ಫೈಟರ್​ ರವಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ನಾಗಮಂಗಲ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಫೈಟರ್ ರವಿ, ಟಿಕೆಟ್ ಸಿಗುತ್ತದೆ ಎಂಬ ಆಸೆಯಿಂದಲೇ ಇತ್ತೀಚೆಗೆ ಬಿಜೆಪಿಗೆ ಸೇರಿದ್ದರು. ಆದರೆ ತಮ್ಮ ನಿರೀಕ್ಷೆ ಹುಸಿಯಾದ್ದರಿಂದ ತೀವ್ರ ಬೇಸರಗೊಂಡಿರುವ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ನಾಗಮಂಗಲ ವಿಧಾನಸಭಾ ಕ್ಷೇತ್ರದ ಟಿಕೆಟ್​ ಸುಧಾ ಶಿವರಾಮೇಗೌಡರಿಗೆ ಸಿಕ್ಕಿದೆ. ಹೀಗಾಗಿ ಮನನೊಂದ ಫೈಟರ್ ರವಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರು-ಮೈಸೂರು ದಶಪಥ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫೈಟರ್​ ರವಿ ಸ್ವಾಗತಿಸಿದ್ದು ವಿವಾದಕ್ಕೀಡಾಗಿತ್ತು. ಈ ಸಂದರ್ಭದ ಫೋಟೋ ವೈರಲ್​ ಆಗಿ ಟ್ರೋಲ್​ಗೂ ಒಳಗಾಗಿತ್ತು.