ಆಕ್ಲಂಡ್: ನ್ಯೂಜಿಲೆಂಡ್ ತನ್ನನ್ನು ತಾನು ಕರೊನಾಮುಕ್ತ ದೇಶವೆಂದು ಘೋಷಿಸಿಕೊಂಡಿದೆ. ಲಾಕ್ಡೌನ್ನಿಂದಾಗಿ ಜಾರಿಯಲ್ಲಿದ್ದ ಎಲ್ಲ ನಿರ್ಬಂಧಗಳನ್ನು ಸಡಿಲಿಸಿದೆ. ಸರ್ಕಾರಿ, ಖಾಸಗಿ ಸಭೆ ಸಮಾರಂಭಗಳಿಗೂ ಅನುಮತಿ ನೀಡಿದೆ. ಬಸ್, ಸಂಚಾರ, ವಿಮಾನ ಯಾನಕ್ಎಕ ಅವಕಾಶ ನೀಡಲಾಗಿದೆ. ಹೀಗಿದ್ದರೂ ಒಂದು ಸಂಗತಿ ಅಲ್ಲಿನ ಮಂದಿಯ ನೆಮ್ಮದಿ ಕಸಿದಿದೆ.
ಪಶ್ಚಿಮ ಆಕ್ಲಂಡ್ನ ಗ್ರಾಮವಾದ ತಿತಿರಂಗಿಯಲ್ಲಿ ಜನರು ನೆಮ್ಮದಿಯಿಂದ ನಿದ್ದೆ ಮಾಡಲಾಗುತ್ತಿಲ್ಲ. ಇಡೀ ದಿನ ಕಾಡು ಕೋಳಿಗಳ ಕ್ಕು, ಕ್ಕು ಎಂಬ ಸದ್ದು ಕಿವಿಗಪ್ಪಳಿಸುತ್ತಲೇ ಇರುತ್ತದೆ. ಕೆಲವರು ಅವುಗಳಿಗಾಗಿ ಅಳಿದುಳಿದ ಆಹಾರ ತಂದಿಟ್ಟರೆ ಬೆಕ್ಕಿನ ಗಾತ್ರದ ಹೆಗ್ಗಣಗಳು ಅದನ್ನು ಕಬಳಿಸುತ್ತವೆ.
ಲಾಕ್ಡೌನ್ ಅವಧಿಯಲ್ಲಿ ಜನರ ಸಂಚಾರವೇ ಇರಲಿಲ್ಲ. ಹೀಗಾಗಿ ಕಾಡಿನಿಂದ ಗ್ರಾಮಕ್ಕೆ ದಾಳಿಯಿಟ್ಟು ಎಲ್ಲೆಂದರಲ್ಲಿ ಓಡಾಡುತ್ತಿದ್ದವು. ಆದರೆ, ಲಾಕ್ಡೌನ್ ಮುಗಿದ ಬಳಿಕ ಜನ, ವಾಹನಗಳ ಸಂಚಾರ ಆರಂಭವಾದರೂ ಯಾವುದಕ್ಕೂ ಹೆದರುತತ್ಇಲ್ಲ. ಮತ್ತೆ ಕಾಡಿಗೆ ತೆರಳದೇ ಜನರ ಜೀವನಕ್ಕೆ ಅಡ್ಡಿಯಾಗಿವೆ ಎಂಬುದು ಸ್ಥಳೀಯರ ಅಭಿಪ್ರಾಯ.
ಕಾಡು ಕೋಳಿಗಳಷ್ಟೇ ಅಲ್ಲ, ಕಾಡು ಕುದುರೆಗಳು ಕೂಡ ಆಪತ್ತು ತಂದೊಡ್ಡಿವೆ. ನ್ಯೂಸೌತ್ ವೇಲ್ಸ್ನಲ್ಲಿರುವ ಕೋಸಿವೊಸ್ಕೋ ರಾಷ್ಟ್ರೀಯ ಅಭಯಾರಣದಲ್ಲಿರುವ 4,000ಕ್ಕೂ ಅಧಿಕ ಕಾಡು ಕುದುರೆಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಹಿಡಿದು ಬೇರೆಡೆ ಬಿಡುವ ಉದ್ದೇಶವಿದ್ದರೂ ಕೆಲವನ್ನು ಕೊಲ್ಲುವುದು ಅನಿವಾರ್ಯವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ರಾಷ್ಟ್ರೀಯ ಅಭಯಾರಣ್ಯದಲ್ಲಿ ಬೆಂಕಿ ಅಪಾರ ಸಸ್ಯ ಸಂಪತ್ತು ನಾಶವಾಗಿದೆ. ಇನ್ನುಳಿದ ಸೂಕ್ಷ್ಮ ಸಸ್ಯವರ್ಗಗಳನ್ನು ಈ ಕುದುರೆಗಳು ಹಾಳ ಮಾಡುತ್ತಿವೆ. ಹೀಗಾಘಿ ಇವನ್ನು ಬೇರೆಡೆ ಕಳುಹಿಸಲಾಗುತ್ತಿದೆ. ಅಲ್ಲಿಗೆ ನ್ಯೂಜಿಲೆಂಡ್ ಜನರು ಕರೊನಾದಿಂದ ಮುಕ್ತರಾಗಿದ್ದರೂ, ಲಾಕ್ಡೌನ್ನಿಂದಾದ ಹಲವು ಅವಾಂತರಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎನ್ನುವುದಂತೂ ಸತ್ಯ. ಭಾರತದಲ್ಲಾಗಿದ್ದರೆ ರಸದೌತಣವಾಗುತ್ತಿದ್ದ ಕೋಳಿಗಳು ಅಲ್ಲಿ ಸಮಸ್ಯೆಯಾಗಿರುವುದನ್ನು ದುರಂತ ಎನ್ನಲೇಬೇಕು.