ನ್ಯೂಸ್

ಬೆಂಗಳೂರಿನ ರಾಜಕಾಲುವೆಯಲ್ಲಿ ಕೊಚ್ಚಿಹೋದ 6 ವರ್ಷದ ಬಾಲಕಿ

ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಬಾಲಕಿ ರಾಜಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.

ಬೆಳ್ಳಂದೂರಿನ ಕರಿಯಮ್ಮನಗರದ ಮಂತ್ರಿ ಅಪಾರ್ಟ್ ಮೆಂಟ್ ಬಳಿ ಇಂದು ಮಧ್ಯಾಹ್ನ 2ರ ಸುಮಾರಿನಲ್ಲಿ ಈ ಅವಘಡ ಸಂಭವಿಸಿದ್ದು, ಬಾಲಕಿ ಪತ್ತೆಗಾಗಿ ಅಗ್ನಿಶಾಮಕ ದಳದ 25 ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಸ್ಸಾಂ ಮೂಲದ ನಿತ್ಯಾನಂದ ಅವರ ಪುತ್ರಿ ಮೊನಾಲಿಕ(6) ಮಧ್ಯಾಹ್ನ ಮನೆ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಆಯತಪ್ಪಿ ರಾಜಕಾಲುವೆಗೆ ಬಿದ್ದಿದ್ದು, ಕೊಳಚೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಇದನ್ನೂ ಓದಿರಿ ಹೆಸರಿಗೆ ಈತ ಭಕ್ತಿ ಭೂಷಣ, ಮಕ್ಕಳ ಪಾಲಿಗೆ ‘ಕಾಮ’ಪಿಶಾಚಿ

ಸ್ಥಳಕ್ಕೆ ಭೇಟಿ ನೀಡಿದ ಮಾರತಹಳ್ಳಿ ಪೊಲೀಸರು, ಸರ್ಜಾಪುರ ಮತ್ತು ಮಹದೇವಪುರ ಅಗ್ನಿಶಾಮಕ ತಂಡ ಬಾಲಕಿಯನ್ನು ಹುಡುಕಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೋಟ್ ಮೂಲಕ ಬಾಲಕಿಯ ಪತ್ತೆ ಕಾರ್ಯ ಸಾಗಿದ್ದು, ಸಂಜೆ 5.30 ಆದರೂ ಮೊನಾಲಿಕಾ ಸಿಕ್ಕಿಲ್ಲ.