ನ್ಯೂಯಾರ್ಕ್: ಕರೊನಾ ಸಂಕಷ್ಟ ನಮ್ಮ ಜೀವನ ವಿಧಾನವನ್ನೇ ಬದಲಿಸಿದೆ. ಸದ್ಯ ಶಾಲೆಗಳು ಆರಂಭವಾಗದ ಕಾರಣ ಮನೆಯೇ ಮಕ್ಕಳಿಸ್ಕೂಲ್ ಆಗಿದೆ. ವಿಡಿಯೋ ಆ್ಯಪ್ಗಳಲ್ಲಿ ಹಾಜರಾಗುವ ಟೀಚರ್ಗಳು ಪಾಠ ಮಾಡ್ತಾರೆ. ಮಕ್ಕಳು ತಾವಿದ್ದಲ್ಲೇ, ಇರುವ ಸ್ಥಿತಿಯಲ್ಲೇ ಪಾಠ ಕೇಳ್ತಾರೆ...!
ತರಗತಿಯಲ್ಲಿನ ಪಾಠ ಸದ್ಯಕ್ಕಂತೂ ಮರೀಚಿಕೆಯಾಗಿದೆ. ಆದರೆ, ಇಲ್ಲೊಬ್ಬ ತನ್ನ ಮಗಳಿಗಾಗಿ ಮನೆಯ ಗ್ಯಾರೇಜ್ ಅನ್ನೇ ಕ್ಲಾಸ್ರೂಮ್ ಆಗಿ ಮಾರ್ಪಡಿಸಿದ್ದಾನೆ. ಈ ವಿಡಿಯೋ ಈಗ ಭಾರಿ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ; VIDEO: ಫೋನ್ ಎ- ಫ್ರೇಂಡ್ ಅಂತಾ ಹೆಂಡತಿಗೆ ಕರೆ ಮಾಡಿದ್ರೆ ಉತ್ತರಿಸಿದ್ದು ಇನ್ಯಾರೋ? ಲೈವ್ನಲ್ಲಿ ಬಯಲಾಯ್ತಾ ಪತ್ನಿ ಅಫೇರ್…!
ವಿಡಿಯೋದಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಮಗುವೊಂದು ಡೆಸ್ಕ್ ಮೇಲೆ ಕುಳಿತು ಪಾಠ ಕೇಳುತ್ತಿರುವುದನ್ನು ನೋಡಬಹುದು. ಎದುರಿಗೆ ನಿಂತು ಶಿಕ್ಷಕಿಯೇ ಪಾಠ ಹೇಳುತ್ತಿದ್ದಾಳೆ ಎನಿಸುತ್ತದೆ. ಏಕೆಂದರೆ, ಶಿಕ್ಷಕಿಯ ಕಟೌಟ್ಗೆ ಟ್ಯಾಬ್ಲೆಟ್ ಅಂಟಿಸಲಾಗಿದ್ದು ಅದರಲ್ಲಿ ಪಾಠ ಮಾಡುತ್ತಿರುವುದನ್ನು ನೋಡಬಹುದು.
ಬಿಳಿಯ ಬೋರ್ಡ್ ನೇತು ಹಾಕಲಾಗಿದೆ. ಅದರಲ್ಲಿ ಲಿಲ್ಲಿಯನ್ಸ್ ಕ್ಲಾಸ್ ಎಂದು ಬರೆದಿದ್ದರೆ, ಪಕ್ಕದಲ್ಲಿ ವೇಳಾಪಟ್ಟಿಯಿದೆ. ವಾರದ ಎಲ್ಲ ದಿನಗಳ ಪಾಠದ ಪಟ್ಟಿ ಅಲ್ಲಿದೆ.
ಜತೆಗೆ ಕೋಣೆಯಲ್ಲಿ ದೊಡ್ಡ ಟಿವಿಯೊಂದನ್ನು ನೇತುಹಾಕಲಾಗಿದೆ. ಕೆಲ ಮಾರ್ಕರ್ ಹಾಗೂ ಬೋರ್ಡ್ ಮೇಲೆ ಬರೆಯಲು ಉಪಯೋಗಿಸವ ವಸ್ತುಗಳನ್ನು ಇಡಲಾಗಿದೆ. ಮಗಳ ಮೇಲಿನ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.