ಕೊಡಗು: ಕೌಟುಂಬಿಕ ಕಲಹವೊಂದು ಕೊಲೆಯವರೆಗೆ ತಲುಪಿದ ಪ್ರಕರಣವೊಂದು ನಡೆದಿದೆ. ಅಂದರೆ ಇಲ್ಲೊಂದು ಕಡೆ ತಂದೆಯೇ ಮಗನನ್ನು ಗುಂಡಿಟ್ಟು ಕೊಲೆ ಮಾಡಿರುವ ಪ್ರಕರಣ ನಡೆದಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂದೇಟಿರ ನಿರನ್ (28) ಕೊಲೆಗೀಡಾದ ಯುವಕ. ಈತನ ತಂದೆ ನಂದೇಟಿರ ಚಿಟ್ಟಿಯಪ್ಪ (58) ಕೊಲೆ ಆರೋಪಿ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಂದೆ ತನ್ನ ಬಳಿ ಇರುವ ಒಂಟಿ ನಳಿಗೆ ಕೋವಿಯಿಂದ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಪೊಲೀಸರಿಗೆ ಶರಣಾಗಿದ್ದು, ವಿಚಾರಣೆ ನಡೆಯತ್ತಿದೆ.