ನ್ಯೂಸ್

ಬುದ್ಧಿಮಾತು ಹೇಳಿದ ತಂದೆಯನ್ನೇ ಕೊಂದ; ಸಲಾಕೆಯಿಂದ ಮರ್ಮಾಂಗಕ್ಕೇ ಹೊಡೆದ..

ಬೆಂಗಳೂರು: ಬುದ್ಧಿಮಾತು ಹೇಳಿದ್ದಕ್ಕೆ ತಂದೆಯನ್ನೇ ಕೊಲೆ ಮಾಡಿದ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದೆ.

ಚನ್ನಬಸವರಾಜು (56) ಕೊಲೆಯಾದ ವ್ಯಕ್ತಿ. ಈತನ ಪುತ್ರ ರಾಕೇಶ್ ಕೊಲೆ ಆರೋಪಿ. ಹೊಲದಲ್ಲಿ ಇಬ್ಬರೂ ಜತೆಗೆ ಕೆಲಸ ಮಾಡುತ್ತಿದ್ದಾಗ ಈ ಕೊಲೆ ನಡೆದಿದೆ. ಕೆಲಸದ ವೇಳೆ ತಂದೆ ಚನ್ನಬಸವರಾಜು ಮಗನಿಗೆ ಬುದ್ಧಿಮಾತು ಹೇಳಿದ್ದರು.

ಆದರೆ ಇದನ್ನು ಕೇಳದ ಮಗ ರಾಕೇಶ್, ಸಿಟ್ಟಿಗೆದ್ದು ಕೈಯಲ್ಲಿದ್ದ ಸಲಾಕೆಯಿಂದ ತಂದೆಯ ಮರ್ಮಾಂಗಕ್ಕೇ ಹೊಡೆದಿದ್ದಾನೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ತಂದೆ ಸಾವಿಗೀಡಾಗಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.