ಪುದಿಚೇರಿ: ಪುದುಚೇರಿಯ ಯಾನಂನ ಉದ್ಯಮಿ ಸತ್ಯ ಭಾಸ್ಕರ್ ಮತ್ತು ಅವರ ಕುಟುಂಬವು ತನ್ನ ಅಳಿಯ ಮತ್ತು ಮಗಳಿಗೆ ಆತಿಥ್ಯ ಮತ್ತು 465 ಭಕ್ಷ್ಯಗಳನ್ನು ಬಡಿಸುವ ಮೂಲಕ ಮಕರ ಸಂಕ್ರಾಂತಿಯನ್ನು(Sankranti) ಆಚರಿಸಿದ್ದಾರೆ. ಇದೀಗ ಈ ವಿಶಿಷ್ಟ ಭಕ್ಷ್ಯ ಭೋಜನದ ವಿಡಿಯೋ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ನರ್ಗೀಸ್ & ವರುಣ್ ಧವನ್ ಕಿಸ್ ವಿಡಿಯೋ ವೈರಲ್; ನಿರ್ದೇಶಕರು ಕಟ್ ಹೇಳಿದ್ರು ಸೀನ್ ನಿಲ್ಲಿಸದ ನಟ | Varun Dhawan
ಎರಡು ಬೃಹತ್ ಕುರ್ಚಿಯಲ್ಲಿ ಮಗಳು ಮತ್ತು ಆಳಿಯನ್ನು ಕೂಡಿಸಲಾಗಿದ್ದು, ಬರೊಬ್ಬರಿ 465 ವಿವಿಧ ಖಾದ್ಯಗಳನ್ನು ಬಡಿಸಿದ್ದಾರೆ. ಇದೀಗ, ಇದರ ಕ್ಲಿಪ್ಗಳು ಸೊಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಲ್ಲದೆ, ಭರಪೂರ ಕಾಮೆಂಟ್ಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ. ಈ ವಿಡಿಯೋ ಕೆಲವರಿಗೆ ಆಶ್ಚರಿ ಉಂಟು ಮಾಡಿದರೆ, ಇನ್ನು ಕೆಲವರಿಗೆ ಹಾಸ್ಯ ಭರೀತವಾಗಿದೆ ಎಂದು ಹೇಳಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಉದ್ಯಮಿ ತನ್ನ ಅಳಿಯ ಮತ್ತು ಮಗಳಿಗೆ ಆತಿಥ್ಯ ವಹಿಸಿ ಭಕ್ಷ್ಯಗಳನ್ನು ಬಡಿಸುತ್ತಿರುವು ಕ್ಲಿಪ್ಗಳನ್ನು ನೋಡಬಹುದು. ಅಲ್ಲದೆ, ಹೂವಿನ ಹಾರ ಮಾವನನ್ನು ನೋಡಿದ ಅಳಿಯ ಭಾವುಕರಾಗಿ ಕಣ್ಣೀರು ಒರೆಸಿಕೊಳ್ಳುವ ದೃಶ್ಯಗಳು ಕಾಣ ಸಿಗುತ್ತಿವೆ.
ಮತ್ತೊಂದು ವಿಡಿಯೋದಲ್ಲಿ ಸಂಕ್ರಾಂತಿ ಆಚರಣೆಯ ಭಾಗವಾಗಿ, ತೆಲಂಗಾಣ ಅಳಿಯಂದಿರು ತಮ್ಮ ಹೊಸದಾಗಿ ಮದುವೆಯಾದ ಆಂಧ್ರದ ಅಳಿಯನಿಗೆ 130 ವಿಭಿನ್ನ ಭಕ್ಷ್ಯಗಳ ಭವ್ಯವಾದ ಔತಣವನ್ನು ಬಡಿಸುವ ಮೂಲಕ ಮಾವನ ಕುಟುಂಬದವರು ಆಶ್ಚರ್ಯಗೊಳಿಸಿದ್ದಾರೆ.
ಹೈದರಾಬಾದ್‌ನ ಸರೂರ್‌ನಗರ ಸಮೀಪದ ಶಾರದನಗರದಲ್ಲಿ ಈ ಸಂಭ್ರಮಾಚರಣೆ ನಡೆದಿದ್ದು, ಆ ಪ್ರದೇಶದ ಕ್ರಾಂತಿ ಮತ್ತು ಕಲ್ಪನಾ ದಂಪತಿಗಳು ತಮ್ಮ ಅಳಿಯನನ್ನು ಸ್ವಾಗತಿಸಲು ಅದ್ದೂರಿ ಊಟವನ್ನು ಸಿದ್ಧಪಡಿಸಿದ್ದಾರೆ. ಅಲ್ಲದೇ, ಈ ಘಟನೆಯನ್ನು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.(ಏಜೆನ್ಸೀಸ್)