ನ್ಯೂಸ್

IIT, NITಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟ್​ ಸಿಕ್ರೆ.. ಮಗನಿಗೆ ಬಂಪರ್​ ಆಫರ್​ ಕೊಟ್ಟ ತಂದೆ!; ಇಂಜಿನಿಯರಿಂಗ್​​ ವಿದ್ಯಾರ್ಥಿಗೆ ಬರೆದ ಪತ್ರ ವೈರಲ್​

IIT, NIT; ಒಬ್ಬ ಯುವಕ ಇಂಜಿನಿಯರ್​ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿ ಉಜ್ವಲ ಭವಿಷ್ಯ ರೂಪಿಸಿಕೊಂಡರೆ ತಂದೆ-ತಾಯಿಗೆ ಖುಷಿಗೆ ಪಾರವೇ ಇಲ್ಲ. ಅದರಲ್ಲೂ ತಂದೆ ಮಕ್ಕಳಿಗೆ ಏನು ಮಾಡಲು ಸೈ. ಇದೀಗ ಮಗನ ವಿಷಯದಲ್ಲಿ ತಂದೆಯೊಬ್ಬರು ವಿಶೇಷ ಪತ್ರ ಬರೆದಿದ್ದಾರೆ.

ಹೌದು, ಜೆಇಇ ಪರೀಕ್ಷೆಯಲ್ಲಿ ಪಾಸಾಗಿ IIT, NITಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಸಿಕ್ಕರೆ, ತಮ್ಮ ನಿವೃತ್ತಿಯವರೆಗೂ ಶೇ.40ರಷ್ಟು ಸಂಬಳ ಮಗನಿಗೆ ಕೊಡುಗೆಯಾಗಿ ಕೊಡುವುದಾಗಿ ಕೈಬರದಹದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಈ ಕುರಿತು ತಮ್ಮ ತಂದೆ ಬರೆದ ಪತ್ರವನ್ನು ಸಾಮಾಜಿಕ ವೇದಿಕೆ ರೆಡ್ಡಿಟ್​ನಲ್ಲಿ ಪೋಸ್ಟ್​ ಮಾಡಿರುವ ಮಗ, ಒಂದಿಷ್ಟು ಪತ್ರದ ಬಗ್ಗೆ ಹೇಳಿಕೊಂಡಿದ್ದಾನೆ.

Posts from the jeeneetards community on Reddit

ಪತ್ರದಲ್ಲಿನೀದೆ..?

ಜೆಇಇ ಪರೀಕ್ಷೆಯಲ್ಲಿ ಪಾಸಾಗಿ IIT, NITಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಸಿಕ್ಕರೆ ತಮ್ಮ ನಿವೃತ್ತಿಯಗವರೆಗೂ ಶೇ.40 ಸಂಬಳವನ್ನು ಮಗನಿಗೆ ಕೊಡುತ್ತೇನೆ. ಇಲ್ಲವಾದರೆ, ಜೆಇಇ ಪರೀಕ್ಷೆ ಪಾಸಾಗಿ ಪ್ರತಿಷ್ಠಿತ ಕಾಲೇಜುಳಲ್ಲದೆ 2,3 ಶ್ರೇಣಿ ಕಾಲೇಜುಗಳಾದ್ರೆ ನೀನು( ವಿದ್ಯಾರ್ಥಿ), ನನ್ನ ನಿವೃತ್ತಿಯಾಗುವವರೆಗೂ ಶೇ.100ರಷ್ಟು ಸಂಬಳವನ್ನು ನನಗೆ ನೀಡಬೇಕು ಎಂದು ಕೈಬರಹದಲ್ಲಿ ಬರೆದ ಪತ್ರದ ಬಗ್ಗೆ ಹೇಳುತ್ತಾ ಪೋಸ್ಟ್​ ಮಾಡಿದ್ದಾರೆ. ಇದೀಗ ಈ ಪತ್ರ ಸಖತ್​ ವೈರಲ್​ ಆಗುತ್ತಿದೆ.

ಇನ್ನು ಈ ಪೋಸ್ಟ್​​ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರಿಗೆ ಸಖತ್​ ಇಷ್ಟವಾಗಿದ್ದು, ಸಾವಿರಾರು ತರಹೇವಾರಿ ಕಾಮೆಂಟ್​ಗಳು ಬರುತ್ತೀವೆ.(ಏಜೆನ್ಸೀಸ್​)