Court : ಜಿಲ್ಲಾ ನ್ಯಾಯಾಲಯದ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂಪಾಯಿಗಳನ್ನು ವಂಚಿಸಿ, ವಿದೇಶ ಪ್ರವಾಸ ಮತ್ತು ದುಬಾರಿ ಮೊಬೈಲ್ ಫೋನ್‌ಗಳ ಖರೀದಿಗೆ ಖರ್ಚು ಮಾಡಿದ್ದ ಐಟಿ ತಜ್ಞ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ ಘಟನೆ ಇಂದೋರ್ನಲ್ಲಿ ಮಂಗಳವಾರ (ಜೂ.17) ನಡೆದಿದೆ.
ಇದನ್ನೂ ಓದಿ: ಪ್ರಿಯಕರನ ಜತೆ ಚಕ್ಕಂದ ಆಡಲು ಗಂಡನನ್ನು ದುಬೈಗೆ ಕಳುಹಿಸಿದ ಪತ್ನಿ: ಮನೆಗೆ ಮರಳಿದ ಪತಿಯ ಸ್ಥಿತಿ ಗಂಭೀರ! Extramarital affairs
ಈ ಪ್ರಕರಣದ ತನಿಖೆಯ ದೊರೆತ ದಾಖಲೆಗಳ ಆಧಾರದ ಮೇಲೆ ಗುಜರಾತ್‌ನ ವಲ್ಸಾದ್‌ನಿಂದ ಸಾಹಿಲ್ ರಂಗ್ರೆಜ್ (26) ಮತ್ತು ಆತನ ತಂದೆ ಸಾಜಿದ್ ಸತ್ತಾರ್ (57) ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 5 ರಿಂದ ಜೂನ್ 11 ರ ನಡುವೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದ ಬ್ಯಾಂಕ್ ಖಾತೆಯಿಂದ 64.05 ಲಕ್ಷ ರೂ.ಗಳನ್ನು ವಂಚಿಸಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಂದೋರ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೇಶ್ ದಂಡೋಟಿಯಾ ಹೇಳಿದ್ದಾರೆ. (ಏಜೆನ್ಸೀಸ್)