ನ್ಯೂಸ್

ವರದಕ್ಷಿಣೆ ರೂಪದಲ್ಲಿ ಅಳಿಯಗೆ 3 ಕೋಟಿ ರೂ. ಕೊಟ್ಟ ರೈತ!: ವಿಭಿನ್ನ ಮದುವೆ ಮಾಡುವ ಮೂಲಕ ಗಮನಸೆಳೆದ ಖೋಜ | Dowry

Dowry: ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿದ ರೈತ, ತನ್ನ ಅಳಿಯನಿಗೆ ನಗದು, ಚಿನ್ನ ಮತ್ತು ಪ್ಲ್ಯಾಟ್​ ರೂಪದಲ್ಲಿ ಬರೊಬ್ಬರಿ 3 ಕೋಟಿ ರೂ. ನೀಡಿದ್ದು, ಈ ಮೂಲಕ ನೋಡುಗರನ್ನು ಆಶ್ಚರ್ಯಚಕಿತಗೊಳಿಸಿದ್ದಾನೆ.

ಹೌದು, ರಾಜಸ್ತಾನದ ಸಂಸ್ಕೃತಿಯಲ್ಲಿ, ಸಂಪ್ರದಾಯಕವಾಗಿ ವರನಿಗೆ ವಧುವಿನ ಕಡೆಯವರು ವರದಕ್ಷಿಣೆ ರೂಪದಲ್ಲಿ ಏನ್ನಾನ್ನದರೂ ನೀಡುವ ಪಾರಿಪಾಟವಿದೆ. ಅದರಂತೆ ಇಲ್ಲೊಬ್ಬ ತಂದೆ(ರೈತ) ತನ್ನ ಮಗಳ ಮದುವೆಯಲ್ಲಿ ಈ ರೀತಿಯ ಬಹುಮಾನವನ್ನು ಉದಾರವಾಗಿ ನೀಡುವ ಮೂಲಕ ರಾಜಸ್ತಾನದಲ್ಲಿ ತುಂಬಾ ವೈರಲ್​ ಆಗಿದ್ದಾನೆ. ಅಲ್ಲದೆ, ಮದುವೆಯ ಖರ್ಚಿಗಿಂತ ವರನಿಗೆ ಕೊಟ್ಟ ಬಹುಮಾನವೇ ದುಬಾರಿಯಾಗಿದೆ ಎಂದು ವರದಿಯಾಗಿದೆ.

ಇಲ್ಲಿನ ನಾಗೌರ್​ ನಗರದ ಹನುಮಾನ್​ ಬಾಗ್​ನಲ್ಲಿ ವಾಸಿಸುತ್ತಿರುವ ರಾಬಕ್ಸ್​ ಖೋಜ 1.5 ಕೋಟಿ ರೂ ಕೊಟ್ಟ ರೈತ. ಖೋಜಗೆ ಮೂವರು ಗಂಡು ಮಕ್ಕಳಿದ್ದು, ಏಕೈಕ ಪುತ್ರಿ ಇದ್ದಾಳೆ. ಮೂವರು ಗಂಡು ಮಕ್ಕಳಲ್ಲಿ ಇಬ್ಬರು ಸರ್ಕಾರಿ ನೌಕರರು ಮತ್ತು ಒಬ್ಬ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾನೆ. ಖೋಜ ಅವರು ತಮ್ಮ ಮೂವರು ಗಂಡು ಮಕ್ಕಳೊಂದಿಗೆ ಹನುಮಾನ್​ ಬಾಗ್​ನಲ್ಲಿ ವಾಸ ಮಾಡುತ್ತಿದ್ದು, ತನ್ನ ಏಕೈಕ ಪುತ್ರಿಯನ್ನು ರಾಜಸ್ತಾನದ ಫರ್ದೋಡ್​​ ಗ್ರಾಮದಲ್ಲಿ ವಾಸಿಸುವ ಶಿಕ್ಷಕ ಮದನ್ಲಾಲ್​ಗೆ ಧಾರೆರೆದು ಕೊಟ್ಟಿದ್ದಾನೆ.

ಮಾಯ್ರಾ ಪದ್ಧತಿ

''ಮಾಯ್ರಾ''(ರಾಜಸ್ತಾನದಲ್ಲಿ ರಾಜವಂಶ ಕಾಲದಿಂದಲೂ ಇರುವ ಮದುವೆ ಸಂಪ್ರದಾಯ) ಪದ್ಧತಿಯಲ್ಲಿ ಮದುವೆ ಮಾಡಿದ್ದಾರೆ. ಮೂವರು ಸಹೋದರರು ಒಗ್ಗಟ್ಟಿನಿಂದ ಸಹೋದರಿಗೆ ದುಪಟ್ಟಾ ಹೊದಿಸಿ 'ಮೈರಾ' ಸಮಾರಂಭವನ್ನು ಪಾರಂಭಿಸಿದರು. ಮೈರಾ ಸಮಯದಲ್ಲಿ 1.5 ಕೋಟಿ ರೂ. ನಗದು, 30 ತೊಲ ಚಿನ್ನ ಮತ್ತು 5 ಕಿಲೋಗ್ರಾಂ ಬೆಳ್ಳಿ ಸೇರಿ ನಾಗೌರ್​ ನಗರದಲ್ಲಿನ ಎರಡು ಪ್ಲ್ಯಾಟ್​ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.(ಏಜೆನ್ಸೀಸ್​)