ಮುಂಬೈ; ಮೋಹಿತ್ ಸೂರಿ ಅವರ ಇತ್ತೀಚಿನ ಸಿನಿಮಾವಾದ 'ಸೈಯಾರಾ' ಥಿಯೇಟರ್‌ನಲ್ಲಿ ಪ್ರಸಾರ ಕಾಣುತ್ತಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ಮುಂಬೈ ಸೇರಿದಂತೆ ಬಹುತೇಕ ಕಡೆ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
ಅಂದಹಾಗೆ ಅಭಿಮಾನಿಯೊಬ್ಬರು ತಮ್ಮ ದೇಹಕ್ಕೆ IV ಡ್ರಿಪ್ ಅನ್ನು ಹಾಕಿಕೊಂಡೇ ಥಿಯೇಟರ್‌ನಲ್ಲಿ ಚಿತ್ರವನ್ನು ವೀಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
(ಏಜೆನ್ಸೀಸ್)
'ಸೈಯಾರ' ಸಿನಿಮಾ ರಿಲೀಸ್ ಆದ ಮೂರು ದಿನಗಳಲ್ಲಿ ಭಾರತದಲ್ಲಿ 83 ಕೋಟಿ ರೂ. ಗಳಿಕೆ ಕಂಡಿದೆ. ಈ ಚಿತ್ರದಲ್ಲಿ ಅಹಾನ್, ಅನೀತ್ ಪಡ್ಡ ಜತೆ ರಾಜೇಶ್ ಕುಮಾರ್, ವರುಣ್ ಬಡೋಲಾ, ಶಾದ್ ರಾಂಧವ ಮುಂತಾದವರು ನಟಿಸಿದ್ದಾರೆ.
ಅಸ್ವಸ್ಥನಾಗಿರುವ ಯುವಕನೊಬ್ಬ ಕೈಗೆ ಐವಿ ಡ್ರಿಪ್ ಅಳವಡಿಸಿಕೊಂಡು ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. 'ಸೈಯಾರಾ' ಚಿತ್ರ ನೋಡುವಾಗ ಅವನು ಭಾವುಕನಾಗುತ್ತಾ ಪಕ್ಕದ ಸಲೈನ್ ಸ್ಟ್ಯಾಂಡ್ ಅನ್ನು ಹಿಡಿದುಕೊಂಡಿರುವುದು ಕಂಡುಬರುತ್ತದೆ. ಅವನ ಸ್ನೇಹಿತರು ಅವನ ಪಕ್ಕದಲ್ಲಿ ಕುಳಿತಿದ್ದು, ಕೆಲವು ವೀಕ್ಷಕರು ತಮ್ಮ ಫೋನ್‌ಗಳಲ್ಲಿ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ.