ನ್ಯೂಸ್

ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಹರಕೆ; 1 ಕ್ವಿಂಟಾಲ್ ಭಾರದ ಅಕ್ಕಿ ಮೂಟೆ ಹೊತ್ತು ದೀರ್ಘ ದಂಡ ನಮಸ್ಕಾರ ಹಾಕಿದ ಅಭಿಮಾನಿ

ಗದಗ: ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಅಭಿಮಾನಿಯೊಬ್ಬ ವಿಭಿನ್ನವಾಗಿ ಹರಕೆ ಹೊತ್ತಿದ್ದಾನೆ. ಕಾಂಗ್ರೆಸ್ ಪಕ್ಷದ ಅಭಿಮಾನಿಯೊಬ್ಬ ಒಂದು ಕ್ವಿಂಟಲ್ ಭಾರದ ಅಕ್ಕಿ ಮೂಟ್ಟೆ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿದ್ದಾನೆ.

ಸಿದ್ದರಾಮಯ್ಯ ಸಿಎಂ ಆಗಬೇಕು

ಈ ಬಾರಿ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಜತೆಗೆ ನರಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್ ಯಾವಗಲ್ ಶಾಸಕರಾಗಬೇಕೆಂದು ಹನುಮಂತಪ್ಪ ಜಟ್ಟಿ ಎಂಬಾತ ಹರಕೆ ಹೊತ್ತಿದ್ದಾನೆ.

ಅರ್ಧ ಕಿ.ಮೀ.ಗೂ ಹೆಚ್ಚು ದೀರ್ಘದಂಡ ನಮಸ್ಕಾರ

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿರುವ ವೀರುಪಾಕ್ಷೇಶ್ವರ ದೇವಸ್ಥಾನದಿಂದ ಮಾರುತೇಶ್ವರ ದೇವಸ್ಥಾನದವರೆಗೆ ಅರ್ಧ ಕಿಲೋ ಮೀಟರ್​ಗೂ ಹೆಚ್ಚು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾನೆ. ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ದೀರ್ಘದಂಡ ನಮಸ್ಕಾರ ಹಾಕಿದ್ದಾನೆ.